Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಗ್ಯಾರಂಟಿ ಯೋಜನೆ’ಗಳನ್ನು ನಿಲ್ಲಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.!
KARNATAKA

BIG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಗ್ಯಾರಂಟಿ ಯೋಜನೆ’ಗಳನ್ನು ನಿಲ್ಲಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.!

By kannadanewsnow5718/03/2025 5:33 AM

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಅಧಿವೇಶನದ ಮಧ್ಯಾಹ್ನದ ಕಲಾಪದ ವೇಳೆಯಲ್ಲಿ ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ನಡೆಸಿದ್ದರು. ಆದರೆ ಯಾವುದೇ ಕಾರಣಕ್ಕೂ ಐದು ವರ್ಷಗಳ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಎಸ್ ಸಿ ಪಿ/ಟಿ ಎಸ್ ಪಿ ಯೋಜನೆಯು 2013 ರಲ್ಲಿ ಜಾರಿಗೆ ಬಂದಿದ್ದು, ಈ ಯೋಜನೆಗೆ ಒದಗಿಸಿರುವ ಎಲ್ಲಾ ಅನುದಾನವನ್ನು ಅಧಿಕಾರಿಗಳು ಆ ವರ್ಷದಲ್ಲಿಯೆ ಖರ್ಚು ಮಾಡಬೇಕು. ಸಕಾಲದಲ್ಲಿ ಅನುದಾನ ವೆಚ್ಷವಾಗದ ಪಕ್ಷದಲ್ಲಿ ಮುಂದಿನ ವರ್ಷಕ್ಕೆ ಮುಂದುವರೆಯುವುದು ಇದನ್ನು ಬೇರೆ ಯೋಜನೆಗಳಿಗೆ ವೆಚ್ಚ ಮಾಡುವಂತಿಲ್ಲ ಎಂದರು.

ಈ ವರ್ಷದ ಆಯವ್ಯಯದಲ್ಲಿ 3 ಲಕ್ಷದ 71ಸಾವಿರದ 273 ಕೋಟಿ ಇದ್ದು ಇದರಲ್ಲಿ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆಗೆ 27 ಸಾವಿರದ 674 ಕೋಟಿ ಒದಗಿಸಲಾಗಿದೆ ಎಂದರು. ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಬಡ್ತಿ ಮೀಸಲಾತಿ ಜಾರಿ ಮಾಡಿದ್ದೇವೆ. ಗುತ್ರಿಗೆ ಮೀಸಲಾತಿ ಮಾಡಿದ್ದೇವೆ. 7ಡಿ ರದ್ದು ಮಾಡಿದ್ದೇವೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ರಕ್ಷಣೆ ಕೊಡುವ ಕಾರ್ಯ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದೇವೆ. ಸಮಾಜದಲ್ಲಿ ಅಪರಾದ ಮಾಡಿದವರಿಗೆ ಕಠಿಣವಾದ ಶಿಕ್ಷೆ ಕೊಡಿಸುವಲ್ಲಿ ಗೃಹ ಇಲಾಖೆಯು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪೋಲಿಸರು 75 ಕೋಟಿ ರೂ.ಗಳ ಡ್ರಗ್ಸ್ ಸೀಜ್ ಮಾಡಿದ್ದು, ನಮ್ಮ ಕಾಲದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಡ್ರಗ್ಸ್ ಮಾಫಿಯಾ ಕಡಿಮೆಯಾಗುತ್ತಿದ್ದು, ಇದನ್ನು ಶೂನ್ಯಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು.

ಹಾಲು ಉತ್ಪಾದಕರಿಗೂ ಹಂತ ಹಂತವಾಗಿ ಹಾಲಿನ ಪ್ರೋತ್ಸಾಹ ಧನ ನೀಡುತ್ತಿದ್ದು, ಹಿಂದಿನ ಸರ್ಕಾರ ಬಾಕಿ ಉಳಿಸಿರುವ 600 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಎಂದರು. ಇಂಧನ ದರ, ಸಿಬ್ಬಂದಿಯ ವೇತನ ಹೆಚ್ಚಾದಂತ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಬಸ್ ದರ ಏರಿಸಲಾಯಿತು ಎಂದರು. ರೈತರ ಆತ್ಮಹತ್ಯೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಗಳು, ರೈತರ ಆತ್ಮಹತ್ಯೆಯು ರಾಜ್ಯದಲ್ಲಿ ಕಡಿಮೆಯಾಗಿದ್ದು, ಈ ವರ್ಷ ಫೆಬ್ರವರಿ ಅಂತ್ಯದವರೆಗೆ 644 ರೈತರ ಆತ್ಮಹತ್ಯೆಗಳು ನಡೆದಿದ್ದು, ಇದನ್ನು ಪೂರ್ಣವಾಗಿ ನಿಲ್ಲಿಸಲು ಸರ್ಕಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗಾಗಿ ವೈಟ್ ಟ್ಯಾಪಿಂಗ್ ಗೆ 1700 ಕೋಟಿ, ಗುಂಡಿ ಮುಚ್ಚಲು ಪ್ರತಿ ವಾರ್ಡಿಗೆ 15 ಲಕ್ಷ ರೂ.ಗಳನ್ನು, ಡಾಂಬರೀಕರಣ ಮಾಡಲು 700 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ ಎಂದರು. ಗೌರವಾನ್ವಿತ ರಾಜ್ಯಪಾಲರು ಮಾಡಿರುವ ಭಾಷಣ ಸತ್ಯವಾಗಿದೆ ಎಂದ ಮುಖ್ಯಮಂತ್ರಿಗಳು, 3ನೇ ಮಾರ್ಚ್ 2025ರಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲಿ ಸೇರಿರುವ ವಿಧಾನಸಭೆಯ ಸದಸ್ಯರಾದ ನಾವು ಗೌರವಾನ್ವಿತ ರಾಜ್ಯಪಾಲರಿಗೆ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.

BIG NEWS: Guarantee schemes in the state will not be stopped for any reason: CM Siddaramaiah clarifies.!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM1 Min Read

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM1 Min Read

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM2 Mins Read
Recent News

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM
State News
KARNATAKA

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

By kannadanewsnow0511/04/2026 5:39 AM KARNATAKA 1 Min Read

ಬೆಂಗಳೂರು : ಉಷ್ಣಾಂಶ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಸುಡುಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ…

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.