ತುಮಕೂರು/ಪಾವಗಡ: ಜಿಲೆಟಿನ್ ಇಟ್ಟು ಗ್ರಾಮ ಪಂಚಾಯತ್ ಕಟ್ಟಡ ಧ್ವಂಸ ಮಾಡಿರುವ ಘಟನೆ, ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಗುರುವಾರ ರಾತ್ರಿ 9 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಸ್ಪೋಟದ ಶಬ್ದ ಕೇಳಿದ ಸ್ತಳೀಯ ಜನತೆ ಸ್ಥಳಕ್ಕೆ ಓಡಿ ಬಂದು ನಡೆದ ಅವಘಡದ ಬಗ್ಗೆ ಭಯಭೀತರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಪಂಚಾಯತ್ ಕಟ್ಟಡದ ಎರಡು ಗೋಡೆಗಳು ಕೂಡ ಬಿರುಕು ಬಿಟ್ಟಿದ್ದು, ಒಂದು ಭಾಗ ಕುಸಿದು ಹೋಗಿದೆ ಎನ್ನಲಾಗಿದೆ. ಇದಲ್ಲದೇ ಎರಡು ಕುರ್ಚಿಗಳು ಭಸ್ಮವಾಗಿವೆ ಎನ್ನಲಾಗಿದೆ.
ಪೊಲೀಸರು ಹಾಗೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾವಗಡ ತಾಲೂಕಿನ ವೈಎಸ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.