ದಾವಣಗೆರೆ : ಜಾತಿಗಣತಿ ಬಿಡುಗಡೆ ಮಾಡಿದ ಕೊಡಲೇ ಸರ್ಕಾರ ಬೀಳುತ್ತದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದರು. ವರದಿ ಬಿಡುಗಡೆ ಮಾಡಿದರೆ ನೂರಕ್ಕೆ ನೂರು ಸರ್ಕಾರ ಪತನ ಆಗಲಿದೆ ಎಂದು ತಿಳಿಸಿದರಿ.
ಜಾತಿ ಗಣತಿ ಅವೈಜ್ಞಾನಿಕವಾಗಿದ್ದು. ಇವರು ಯಾರ ಮನೆಗೆ ಬಂದು ಜಾತಿ ಗಣತಿ ಮಾಡಿದ್ದಾರೆ? ರಾಜ್ಯದಲ್ಲಿ ಜಾತಿ ಜನಗಣತಿ ಪಾರದರ್ಶಕವಾಗಿ ಮಾಡಿಲ್ಲ. ಜಾತಿ ಗಣತಿ ವರದಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಮುಸ್ಲಿಮರಿಗೆ 4 ಪರ್ಸೆಂಟ್ ಇದ್ದ ಮೀಸಲಾತಿ 8 ಪರ್ಸೆಂಟ್ ಮಾಡುತ್ತಿದ್ದಾರೆ.ಬಹು ಸಂಖ್ಯಾತರಾದ ಅವರಿಗೆ ಮೀಸಲಾತಿ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.
ವೀರಶೈವ ಲಿಂಗಾಯತರನ್ನ ಒಡೆಯುವ ಕೆಲಸ ಮಾಡಿದ್ದಾರೆ. ಅವರದ್ದೇ ಸರ್ಕಾರದಲ್ಲಿ ಹಲವರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಮರಿ ಸಚಿವ ಎಂಪಿ ರೇಣುಕಾಚಾರ್ಯ ತಿಳಿಸಿದರು.