ಬೆಳಗಾವಿ : ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ನಂಬಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿತ್ತು. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಅಂತದ್ದೇ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ನಂಬಿ ಕುಟುಂಬವೊಂದು ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಘಟನೆ ಜಿಲ್ಲೆಯ ಖಾನಾಪುರ ಭೀಮಗಢ ಅರಣ್ಯ ಪ್ರದೇಶಲ್ಲಿ ನಡೆದಿದೆ.
ಬಿಹಾರ ಮೂಲದ ರಣಜಿತದಾಸ್ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮಧ್ಯೆ ಸಮೀಪ ಗೂಗಲ್ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ಬಂದಿದ್ದಾರೆ. ಆಂಧ್ರಪ್ರದೇಶದಿಂದ ಗೋವಾಕ್ಕೆ ಕಾರಿನಲ್ಲಿ ನಾಲ್ವರು ಹೊರಟಿದ್ದರು. ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದಾಗ ದಾರಿ ತಪ್ಪಿ ಫಜೀತಿಗೆ ಒಳಗಾಗಿದ್ದರು. ಮಧ್ಯರಾತ್ರಿ ದಾರಿತಪ್ಪಿ ಕಾರು 10 ಕಿ.ಮೀ ಕಾಳಿನೊಳಗೆ ಹೋಗಿತ್ತು. ರಸ್ತೆ ಮುಗಿದು ಹಳ್ಳ ಬಂದಾಗ ನಾವು ದಾರಿ ತಪ್ಪಿದ್ದೇವೆ ಎಂದು ಅವರಿಗೆ ಅರಿವಾಗಿದೆ.
ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟವರ್ಕ್ ಸಿಗದೇ ಪರದಾಡಿದ್ದಾರೆ. ನಾಲ್ಕು ಕಿಲೋ ಮೀಟರ್ ಹೊರ ಬಂದ ಬಳಿಕ ನೆಟವರ್ಕ್ ಸಿಕ್ಕ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ 112 ಸಿಬ್ಬಂದಿಗೆ ಕರೆ ಮಾಡಿದ್ದರು. ಈ ವೇಳೆ ಚಾಲಕ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ.