ಬೆಂಗಳೂರು : 2025-26 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ NMMS ವಿದ್ಯಾರ್ಥಿ ವೇತನಕ್ಕಾಗಿ National Scholarship Portal ನಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು, ದಿನಾಂಕ:2-6-2025 ರಿಂದ NSP ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಾರಂಭಿಸಿರುವುದಾಗಿ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ.
ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವಂತೆ, ಪ್ರಸಕ್ತ ಸಾಲಿನಲ್ಲಿ National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಕಲ್ಲಿಸಲು, ಅನುಸರಿಸಬೇಕಾದ ಪ್ರಮುಖ ಅಂಶಗಳು :
2025-26ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. *(OTR) is a unique 14-digit number issued based on the Aadhaar/Aadhaar Enrolment ID (EID)
One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.
NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೋಬೈಲ್ಗೆ SMS ಮೂಲಕ Reference / OTR ಸಂಖ್ಯೆ ಕಳುಹಿಸಲಾಗುತ್ತಿದೆ.
Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) 2F National Scholarship Portal ឥ Student Login ឥដ្ឋ ដ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸಸ್ ಸಂಖ್ಯೆಯೆನ್ನು ಪಡೆದುಕೊಳ್ಳಬೇಕಾಗುತ್ತದೆ.
2025-26ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)