ಬೆಂಗಳೂರು : 2024-25ನೇ ಸಾಲಿಗೆ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ (ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ) – ಪೂರಕ ಪೌಷ್ಠಿಕ ಆಹಾರ ವಿತರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ರಿಂದ 8ನೇ ತರಗತಿ ಮಕ್ಕಳು ಸೇರಿದಂತೆ 9 ಮತ್ತು 10ನೇ ತರಗತಿ ಮಕ್ಕಳಿಗೂ ಸಹ ವಿಸ್ತರಿಸಲಾಗಿದ್ದು, ವಾರ್ಷಿಕ ಒಟ್ಟು 80 ದಿನಗಳ ಅವಧಿಗೆ 1 ರಿಂದ 10ನೇ ತರಗತಿ ಮಕ್ಕಳಿಗೆ ಅನುಷ್ಠಾನಗೊಳಿಸಲು ಉಲ್ಲೇಖಿತ ಆದೇಶದಲ್ಲಿ ಅನುಮತಿ ನೀಡಿ ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮವನ್ನು 2024-25ನೇ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿ ಮಕ್ಕಳಿಗೆ ಒಟ್ಟು 80 ದಿನಗಳ ಅವಧಿಗೆ ಒದಗಿಸಲು ತೀರ್ಮಾನಿಸಿರುತ್ತದೆ.
2024-25ನೇ ಸಾಲಿನ ಜೂನ್-2024 ರಿಂದ ಮಾರ್ಚ್-2025 ರವರೆಗೆ ಒಟ್ಟು 40 ವಾರಗಳ ಅವಧಿಯಲ್ಲಿ ಈ ಕೆಳಕಂಡ ವೇಳಾಪಟ್ಟಿಯಂತೆ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಪೌಷ್ಟಿಕ ಆಹಾರದ (Supplementary Nutrition) ರೂಪದಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಿತರಿಸುವ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಮಾರ್ಗಸೂಚಿಯನ್ನು ವಿವರವಾಗಿ ಈ ಕೆಳಕಂಡಂತೆ ನೀಡಲಾಗಿದೆ.
ಪೌಷ್ಟಿಕ ಆಹಾರವಾಗಿ ಮೊಟ್ಟೆ/ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿದ್ಯಾರ್ಥಿಗಳಿಗೆ ಪ್ರತಿ ವಾರದ ಮಂಗಳವಾರ ಮತ್ತು ಗುರುವಾರ ವಿತರಸುವುದು ಒಂದು ವೇಳೆ ಮಂಗಳವಾರ ಅಥವಾ ಗುರುವಾರ ರಜೆ ಘೋಷಣೆಯಾದಲ್ಲಿ ಮುಂದಿನ ದಿನ ವಿತರಿಸುವುದು. ಹಾಗೂ ವಾರ್ಷಿಕ ಒಟ್ಟೂ 80 ವಿತರಣಾ ದಿನಗಳನ್ನು ಕಡ್ಡಾಯವಾಗಿ ಮಾರ್ಚ್-2025ರ ಒಳಗಾಗಿ ಅನುಷ್ಠಾನಗೊಳಿಸಲು ತಪ್ಪದೇ ಕ್ರಮವಹಿಸುವುದು.