ಬೆಂಗಳೂರು : ಸಿಲಿಕಾನ್ ಸಿಟಿ ಎಂದರೆ ನೆನಪಾಗೋದು ಬರಿ ಟ್ರಾಫಿಕ್. ಆದರೆ ಸಿಲಿಕಾನ್ ಸಿಟಿಯ ಟ್ರಾಫಿಕ್ಗೆ ಇರುವ ಒಂದೇ ಒಂದು ಪರಿಹಾರವೆಂದರೆ ಅದು ನಮ್ಮ ಮೆಟ್ರೋ. ಇದೀಗ BMRCL ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದೆ. ಇನ್ನೂ ಹೊಸ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ನಮ್ಮ ಮೆಟ್ರೋದಲ್ಲಿ ಈಗಾಗಲೇ 57 ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಇನ್ನೂಳಿದ ಎರಡು ರೈಲುಗಳನ್ನು ತುರ್ತುಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ. ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ ಒಟ್ಟು 78 ರೈಲುಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ.
ಅಲ್ಲದೇ ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ. ಇದರಲ್ಲಿ ಹಸಿರು ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್ ಬೋರ್ಡ್ ಹಾಗೂ ನೇರಳೆ ಮಾರ್ಗದಲ್ಲಿ ಚಲಘಟ್ಟದಿಂದ ವೈಟ್ಫೀಲ್ಡ್ವರೆಗೆ ಪ್ರತಿನಿತ್ಯ ಸರಾಸರಿ 7 ಲಕ್ಷ ಪ್ರಯಾಣಿಕರು ಮೆಟ್ರೋಸೇವೆಯ ಉಪಯೋಗ ಪಡೆಯುತ್ತಿದ್ದಾರೆ. ಪೀಕ್ ಟೈಮ್ನಲ್ಲಿ ಮೆಟ್ರೋದಲ್ಲಿ ಜನಜಾತ್ರೆಯಂತೆ ಇರುತ್ತದೆ.