Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಧಾರ್ ಕಾರ್ಡ್ ತಿದ್ದುಪಡಿಗೆ ಕೇಂದ್ರದ ಹೊಸ ನಿಯಮ: ಹೆಸರು, ಜನ್ಮದಿನಾಂಕ ಎಷ್ಟು ಬಾರಿ ಬದಲಾಯಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

08/04/2026 7:18 PM

ಈ ಒಂದು ಮಂತ್ರ ಸಾಕು ನಿಮ್ಮ ಸಾಲ ತೀರೋಕೆ, ಇದು ಲೋನ್ ಋಣ ತೀರಿಸುವ ಗುಪ್ತ ರಹಸ್ಯ ಮಂತ್ರ

08/04/2026 7:05 PM

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು

08/04/2026 7:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ
KARNATAKA

BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ

By kannadanewsnow5708/03/2026 9:53 AM

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಇಲಾಖೆಯಲ್ಲಿ 20 ವರ್ಷಗಳ ಸತತ ಸೇವೆ ಪೂರೈಸಿರುವ ಒಟ್ಟು 52 ವೈದ್ಯಾಧಿಕಾರಿಗಳಿಗೆ (ತಜ್ಞರು/ದಂತ ವೈದ್ಯಾಧಿಕಾರಿಗಳು ಸೇರಿದಂತೆ) 3ನೇ ಕಾಲಬದ್ಧ ಪಡೋನ್ನತಿ (ವೇತನ ಮುಂಬಡ್ತಿ) ನೀಡಿ ಆದೇಶ ಹೊರಡಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಈ ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದು, ಅರ್ಹ ವೈದ್ಯರಿಗೆ ರೂ. 70,850 – 1,07,100 ರ ವೇತನ ಶ್ರೇಣಿಯಲ್ಲಿ ಈ ಸೌಲಭ್ಯ ದೊರೆಯಲಿದೆ.

ಆದೇಶದ ಮುಖ್ಯಾಂಶಗಳು:

ಅರ್ಹತೆ: 20 ವರ್ಷಗಳ ಸತತ ಸೇವೆ ಸಲ್ಲಿಸಿದ ವೈದ್ಯರಿಗೆ ಈ ವೇತನ ಬಡ್ತಿ ಅನ್ವಯವಾಗುತ್ತದೆ.

ನಿಯಮಗಳು: ಕರ್ನಾಟಕ ನಾಗರಿಕ ಸೇವಾ (ಜೇಷ್ಟತಾ) ನಿಯಮಗಳು 1957ರ ಅನ್ವಯ ಅರ್ಹತೆಯನ್ನು ನಿರ್ಧರಿಸಲಾಗಿದೆ. ಅನಧಿಕೃತ ಗೈರು ಹಾಜರಿ ಅಥವಾ ಸೇವಾವಧಿಗೆ ಪರಿಗಣಿಸಲಾಗದ ಅವಧಿಗಳನ್ನು ಇದರಲ್ಲಿ ಕಡಿತಗೊಳಿಸಲಾಗುತ್ತದೆ.

ವೇತನ ನಿಗದಿ: ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42(ಬಿ) ರನ್ವಯ ಹೊಸ ವೇತನವನ್ನು ಪುನರ್ ನಿಗದಿಪಡಿಸಲಾಗುವುದು.

ಶಿಸ್ತು ಕ್ರಮ: ಇಲಾಖಾ ವಿಚಾರಣೆ ಬಾಕಿ ಇರುವ ಅಥವಾ ದಂಡನೆಗೆ ಒಳಗಾಗಿರುವ ಅಭ್ಯರ್ಥಿಗಳಿಗೆ ಆ ಅವಧಿಯಲ್ಲಿ ಈ ಸೌಲಭ್ಯ ಅನ್ವಯಿಸುವುದಿಲ್ಲ.

ಹಿಂಪಡೆಯುವಿಕೆ: ಒಂದು ವೇಳೆ ತಪ್ಪು ಮಾಹಿತಿ ನೀಡಿ ಈ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಅಥವಾ ನಿಯಮ ಉಲ್ಲಂಘನೆಯಾದಲ್ಲಿ ಮಂಜೂರು ಮಾಡಲಾದ ಆದೇಶವನ್ನು ಹಿಂಪಡೆಯಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಈ ಆದೇಶವು ಅರ್ಹ ವೈದ್ಯರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಿಂದಲೇ ಜಾರಿಗೆ ಬರಲಿದೆ. ದೀರ್ಘಕಾಲದ ಸೇವೆಯನ್ನು ಗುರುತಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ವೈದ್ಯಕೀಯ ವಲಯದಲ್ಲಿ ಹರ್ಷ ತಂದಿದೆ.

BIG NEWS: Good news for medical officers who have completed 20 years of service in the state: Government orders salary hike
Share. Facebook Twitter LinkedIn WhatsApp Email

Related Posts

ಈ ಒಂದು ಮಂತ್ರ ಸಾಕು ನಿಮ್ಮ ಸಾಲ ತೀರೋಕೆ, ಇದು ಲೋನ್ ಋಣ ತೀರಿಸುವ ಗುಪ್ತ ರಹಸ್ಯ ಮಂತ್ರ

08/04/2026 7:05 PM5 Mins Read

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು

08/04/2026 7:02 PM2 Mins Read

ರಾಜ್ಯದ ಉಪ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಇಬ್ಬಗೆಯ ನೀತಿ: ಸಿಎಂ ಸಿದ್ಧರಾಮಯ್ಯ ಕಿಡಿಕಿಡಿ

08/04/2026 6:57 PM2 Mins Read
Recent News

ಆಧಾರ್ ಕಾರ್ಡ್ ತಿದ್ದುಪಡಿಗೆ ಕೇಂದ್ರದ ಹೊಸ ನಿಯಮ: ಹೆಸರು, ಜನ್ಮದಿನಾಂಕ ಎಷ್ಟು ಬಾರಿ ಬದಲಾಯಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

08/04/2026 7:18 PM

ಈ ಒಂದು ಮಂತ್ರ ಸಾಕು ನಿಮ್ಮ ಸಾಲ ತೀರೋಕೆ, ಇದು ಲೋನ್ ಋಣ ತೀರಿಸುವ ಗುಪ್ತ ರಹಸ್ಯ ಮಂತ್ರ

08/04/2026 7:05 PM

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು

08/04/2026 7:02 PM

ಡಿಎಂಕೆ ‘ಕ್ಯಾಶ್ ಬಾಕ್ಸ್ ಮೈತ್ರಿಕೂಟ’, ಬಿಜೆಪಿ ಕೂಡ ಅದಕ್ಕಿಂತ ಭಿನ್ನವಲ್ಲ: ನಟ, ರಾಜಕಾರಣಿ ವಿಜಯ್ ವಾಗ್ದಾಳಿ

08/04/2026 6:59 PM
State News
KARNATAKA

ಈ ಒಂದು ಮಂತ್ರ ಸಾಕು ನಿಮ್ಮ ಸಾಲ ತೀರೋಕೆ, ಇದು ಲೋನ್ ಋಣ ತೀರಿಸುವ ಗುಪ್ತ ರಹಸ್ಯ ಮಂತ್ರ

By kannadanewsnow0908/04/2026 7:05 PM KARNATAKA 5 Mins Read

ಒಂದು ಮಂತ್ರ ಸಾಕು ಸಾಲ ತೀರುತ್ತೆ. ಈ ಮಂತ್ರ ಹೇಳಿದರೆ ಮೂವತ್ತು ದಿನಗಳಲ್ಲಿ ಸಾಲ ತೀರುತ್ತೆ ಅನ್ನೋ ಕುತೂಹಲಕಾರಿ ಮತ್ತು…

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು

08/04/2026 7:02 PM

ರಾಜ್ಯದ ಉಪ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಇಬ್ಬಗೆಯ ನೀತಿ: ಸಿಎಂ ಸಿದ್ಧರಾಮಯ್ಯ ಕಿಡಿಕಿಡಿ

08/04/2026 6:57 PM

ಪತ್ರಕರ್ತರ ಬದುಕಿಗೆ ಭರವಸೆಯ ಬೆಳಕು ‘ಕೆಯುಡಬ್ಲ್ಯೂಜೆ’: ಬೀದರ್‌ನಲ್ಲಿ 40ನೇ ರಾಜ್ಯ ಸಮ್ಮೇಳನದ ಸಂಭ್ರಮ

08/04/2026 6:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.