ಬೆಂಗಳೂರು : ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಮೆಕ್ಕೆ ಜೋಳ ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಕೆಎಂಎಫ್ ಮೂಲಕ 50 ಸಾವಿರ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರಿಸಿದೆ. ಡಿ.1ರಿಂದ ರಾಜ್ಯದ ಐದು ಕಡೆ ಖರೀದಿ ಕೇಂದ್ರ ಓಪನ್ ಆಗಲಿದೆ.
KMF ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡಲಿದೆ. ತಲಾ ಒಬ್ಬ ರೈತನಿಂದ ಗರಿಷ್ಟ 25 ಟನ್ ಮೆಕ್ಕೆಜೋಳ ಖರೀದಿ ಮಾಡಲಿದೆ. ಪ್ರತಿ ಟನ್ 2,400 ರೂ. ದರ ನಿಗಧಿ ಮಾಡಿದ್ದು MSP ದರದಲ್ಲಿ ಮೆಕ್ಕೆ ಜೋಳ ಖರೀದಿಗೆ ಮುಂದಾಗಿದೆ. ಗುಣಮಟ್ಟದ ಹಿನ್ನೆಲೆ ದರ ವ್ಯತ್ಯಾಸ ಕಂಡುಬಂದಿದೆ. ಮೆಕ್ಕೆಜೋಳ ತೇವಾಂಶ 14 ಡಿಗ್ರಿ ಇದ್ರೆ ಖರೀದಿ ಮಾಡಲಾಗುತ್ತೆ.
ಮೆಕ್ಕೆ ಜೋಳ ಮಾರಾಟ ಮಾಡುವ ರೈತರು ಮೊದಲು ನೊಂದಣಿ ಮಾಡಿಕೊಳ್ಳಬೇಕು.. ಕೃಷಿ ಇಲಾಖೆ, ಇ ಗರ್ವನೆನ್ಸ್, NIC ಮೂಲಕ ರೈತರು ನೋಂದಣಿ ಮಾಡಿಕೊಳ್ಳಬೇಕು. ರೈತರಿಗೆ ಖರೀದಿ ಕುರಿತು ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತೆ. ಆಗ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳ ಮಾರಾಟ ಮಾಡಬೇಕು.
ಎಲ್ಲೆಲ್ಲಿ ಖರೀದಿ ಕೇಂದ್ರ..!?
1) ಗುಬ್ಬಿ
2) ಶಿಕಾರಿಪುರ
3) ಧಾರವಾಡ
4) ಹಾಸನ
5) ಬೆಂಗಳೂರಿನ ರಾಜನಕುಂಟೆ
ಸರ್ಕಾರ ಸೂಚನೆ ಹಿನ್ನೆಲೆ ಕೆಎಂಎಫ್ ನಿಂದ ಮೆಕ್ಕೆ ಜೋಳ ಖರೀದಿ ಮಾಡಲಾಗುತ್ತೆ. ಟೆಂಡರ್ ಮೂಲಕ 2,150 – 2250 ರೂ. ದರದಲ್ಲಿ ಖರೀದಿ ಮಾಡ್ತಿದ್ವಿ.. ಇದೀಗ ಸರ್ಕಾರ ಸೂಚನೆ ಹಿನ್ನೆಲೆ.. ರೈತರಿಂದಲೇ ನೇರವಾಗಿ 2400 ರೂ. ಖರೀದಿ ಮಾಡಲಿದ್ದೇವೆ ಎಂದು KMF MD ಶಿವಸ್ವಾಮಿ ಹೇಳಿಕೆ ನೀಡಿದರು.








