ಹೈದ್ರಾಬಾದ್ : ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಮೊದಲೆರಡು ವಾರಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ ಆದರೆ ಇದೀಗ ಧೋನಿ ಅವರು ಸಿಎಸ್‌ಕೆ ಬಸ್ ಹತ್ತಿದ್ದು ನಾಳೆ ನಡೆಯುವ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗ್ರೌಂಡಿಗೆ ಎಂಟ್ರಿ ಆಗುತ್ತಾರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಹೌದು ಇದಕ್ಕೆ ಪುಷ್ಠಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಎಂ.ಎಸ್ ಧೋನಿ ಸಿಎಸ್‌ಕೆ ಬಸ್ ಹತ್ತುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶನಿವಾರ ಹೈದರಾಬಾದ್‌ನಲ್ಲಿ ಸಿಎಸ್‌ಕೆ ತಂಡ ಎಸ್‌ಆರ್‌ಹೆಚ್‌ನ್ನು ಎದುರಿಸಲಿದೆ. ಹೀಗಾಗಿ ಧೋನಿ ಪಂದ್ಯಕ್ಕೂ ಮುನ್ನ ಹೈದರಾಬಾದ್‌ಗೆ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಸಿಎಸ್‌ಕೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಆದರೆ ಇದರ ಹೊರತಾಗಿ ಪಂದ್ಯದಲ್ಲಿ ಆಡುತ್ತಾರಾ? ಎನ್ನುವ ಕುರಿತು ಈವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಮೊದಲೆರಡು ವಾರಗಳಲ್ಲಿ ಧೋನಿ ಕಾಣಿಸಿಕೊಳ್ಳುವುದಿಲ್ಲ ಎಂದು ಸಿಎಸ್‌ಕೆ ಐಪಿಎಲ್ 2026ರ ಆವೃತ್ತಿ ಆರಂಭಕ್ಕೂ ಮುನ್ನ ತಿಳಿಸಿತ್ತು. ಈಗಾಗಲೇ ಎರಡು ವಾರ ಕಳೆದಿದ್ದು, ಮುಂದಿನ ಪಂದ್ಯದಲ್ಲಿ ಧೋನಿ ಆಡುತ್ತಾರಾ ಎಂದು ಕಾದು ನೋಡಬೇಕಿದೆ.
MSD ✈️ HYD 🦁#WhistlePodu #Yellove pic.twitter.com/9OvxIxfra1
— Chennai Super Kings (@ChennaiIPL) April 16, 2026








