ಬೆಂಗಳೂರು : ಬೆಂಗಳೂರಿನ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಜೊತೆಗೆ ಕಂಡಕ್ಟರ್ ಗಳು ಆಗಾಗ ಕಿರಿಕಿರಿ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಏನೆಂದರೆ ಆಧಾರ್ ಕಾರ್ಡ್ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಮಹಿಳೆಯರಿಗೆ ಬಿಎಂಟಿಸಿ ಕಂಡಕ್ಟರ್ಗಳು ಶಕ್ತಿ ಯೋಜನೆಯ ಟಿಕೆಟ್ ನೀಡುತ್ತಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಅದಕ್ಕೀಗ ಬಿಎಂಟಿಸಿ ಬ್ರೇಕ್ ಹಾಕಿದ್ದು, ಆಧಾರ್ ಕಾರ್ಡ್ ಯಾವ ಭಾಷೆಯಲ್ಲಿದ್ದರೂ ಪರವಾಗಿಲ್ಲ, ವಿಳಾಸ ಕರ್ನಾಟಕದಾಗಿದ್ದರೆ ಸಾಕು ಎಂದು ಆದೇಶ ಹೊರಡಿಸಿದೆ.
ಹೌದು ಇಷ್ಟು ದಿನಗಳ ಕಾಲ ಬಿಎಂಟಿಸಿಯಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಇದೊಂದು ತಲೆನೋವು ಆಗಿ ಪ್ರಣಮಿಸಿತ್ತು. ಕಂಡಕ್ಟರ್ಗಳ ಜೊತೆಗೆ ಮಹಿಳಾ ಪ್ರಯಾಣಿಕರು ಕಿರಿಕ್ ಮಾಡಿಕೊಳ್ಳುತ್ತಿದ್ದರು. ಆದರೂ ಕಂಡಕ್ಟರ್ಗಳು ಆಧಾರ್ ಕಾರ್ಡ್ ನಲ್ಲಿ ಇಂಗ್ಲಿಷ್ ನಲ್ಲಿ ಅಡ್ರೆಸ್ ಇದೆ ಟಿಕೆಟ್ ನೀಡಲ್ಲ ಎಂದು ಮಹಿಳೆಯರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಯಾವ ಭಾಷೆಯಲ್ಲಿದ್ದರೂ ಸರಿ ಟಿಕೆಟ್ ನೀಡಿ ಎಂದು ಆದೇಶ ಹೊರಡಿಸಿದೆ.
ದೇಶದ ನಾಗರೀಕರು ಆಧಾರ್ ಕಾರ್ಡನ್ನು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಎರಡು ಭಾಷೆಯಲ್ಲಿ ಆಧಾರ್ ಕಾರ್ಡ್ ಮುದ್ರಣವಾಗುತ್ತದೆ. ಆದ್ದರಿಂದ ಕನ್ನಡ ಹೊರತುಪಡಿಸಿ ಅನ್ಯಭಾಷೆಯಲ್ಲಿ ಮುದ್ರಿತ (ದ್ವಿಭಾಷೆ) ಆಧಾರ್ ಕಾರ್ಡ್ ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ, ಆ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡಿ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡಲು ಸೂಚನೆ ನೀಡಲಾಗಿದೆ.