ಮಂಡ್ಯ : ಹೆಣ್ಣು ಭ್ರೂಣ ಪತ್ತೆ & ಹತ್ಯೆ ದಂಧೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆಯಾಗಿದೆ. ಪ್ರತಿ ಸಾವಿರ ಗಂಡಿಗೆ 869 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಕ್ರಮದಿಂದ ಲಿಂಗಾನುಪಾತ ಏರಿಕೆಯಾಗಿದೆ. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 930ಕ್ಕೆ ಏರಿಕೆಯಾಗಿದೆ.
ಈ ವರ್ಷ 61 ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಕೆಲ ವರ್ಷಗಳಿಂದ ಮಂಡ್ಯದಲ್ಲಿ ಭ್ರೂಣ ಹತ್ಯೆ ನಡೆಯುತ್ತಿತ್ತು. ಎಗ್ಗಿಲ್ಲದೇ ಸಾವಿರಾರು ಹೆಣ್ಣು ಭ್ರೂಣ ಹತ್ಯೆ ನಡೆಸಲಾಗಿತ್ತು. ಈ ಇಂದು ಪ್ರಕರಣ ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಮಂಡ್ಯ ಪಾಂಡವಪುರ, ನಾಗಮಂಗಲದಲ್ಲಿ ಭ್ರೂಣ ಹತ್ಯೆ ನಡೆದಿತ್ತು. ಆರೋಪಿಗಳು ಬಂಧಿಸಿದ್ರು ಭ್ರೂಣ ಹತ್ಯೆ ಮುಂದುವರೆದಿತ್ತು.