ಬೆಂಗಳೂರು : ವಿಧಾನಸಭೆಯಲ್ಲಿ ಜಿ ರಾಮ್ ಜಿ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರವಾಯಿತು. ನಿರ್ಣಯ ಅಂಗೀಕಾರದ ನಂತರ ಅನಿರ್ದಿಷ್ಟವಧಿಗೆ ಕಲಾಪ ಮುಂದೂಡಿಕೆ ಮಾಡಲಾಯಿತು.
ಜಿ ರಾಮ ಜಿ ಕಾಯ್ದೆ ವಿರುದ್ಧ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದರು. ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ನಿರ್ಣಯವನ್ನು ಸ್ಪೀಕರ್ ಯುಟಿ ಖಾದರ್ ಮತಕ್ಕೆ ಹಾಕಿದ್ದರು. ನಿರ್ಣಯ ಅಂಗೀಕರವಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಪ್ರಕಟಿಸಿದರು. ಬಳಿಕ ಅನಿರ್ದಿಷ್ಟವಧಿಗೆ ವಿಧಾನಸಭೆ ಕಲಾಪ ಮುಂದೂಡಲಾಯಿತು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ಹೊರ ಹಾಕಿದರು ಬಳಿಕ ಸಭಾ ತ್ಯಾಗ ಮಾಡಿದ ಪ್ರಸಂಗ ನಡೆಯಿತು.








