ಬೆಂಗಳೂರು : ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಮತ್ತೆ ಮಳೆ ಶುರುವಾಗಿದೆ. ನಿನ್ನೆ ರಾತ್ರಿ ಬೆಂಗಳೂರು ನಗರದಾದ್ಯಂತ ಮಳೆ ಸುರಿದಿತ್ತು. ಇನ್ನೇನು ಮಳೆ ನಿಲ್ಲುತ್ತದೆ ಎಂದು ಹೆಸರು ಬಿಡುವ ಅಷ್ಟರಲ್ಲಿ ಇದೀಗ ಮತ್ತೆ ಮಳೆ ಶುರುವಾಗಿದೆ.
ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಎಂಜಿ ರಸ್ತೆ, ರಿಚ್ಮಂಡ್ ವೃತ್ತ, ಲಾಲ್ಬಾಗ್, ಚಾಮರಾಜಪೇಟೆ, ಮಲ್ಲೇಶ್ವರಂ, ಜಯನಗರ, ಶಿವಾನಂದ ಸರ್ಕಲ್, ಹೆಬ್ಬಾಳ ಯಲಹಂಕ, ಟೌನ್ ಹಾಲ್, ಮೈಸೂರು ರಸ್ತೆ, ಕೆಂಗೇರಿ, ಆರ್ ಆರ್ ನಗರ, ಕೆ ಆರ್ ಮಾರುಕಟ್ಟೆ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ. ಮಳೆಗೆ ನಗರದ ಹಲವಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.