ಕಲಬುರ್ಗಿ : ನಾರಾಯಣಪುರ ಜಲಾಶಯದಿಂದ ಕಲ್ಬುರ್ಗಿ, ಯಾದಗಿರಿ ಹಾಗು ಜಿಲ್ಲೆಗಳಿಗೆ ನಾಳೆಯಿಂದ ಏಪ್ರಿಲ್ 6ರ ವರೆಗೆ 0.80 ಟಿಎಂ ಸಿ ನೀರು ಹರಿಸುವಂತೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೌದು ನಾರಾಯಣಪುರ ಜಲಾಶಯದಿಂದ 0.80 ಟಿಎಂಸಿ ನೀರು ಹರಿಸುವಂತೆ ಕಲಬುರ್ಗಿ ಹೈಕೋರ್ಟ್ ಪೀಠದಿಂದ ರಾಜ್ಯ ಸರ್ಕಾರಕ್ಕೆ ಇದೀಗ ನಿರ್ದೇಶನ ನೀಡಿಲಾಗಿದೆ. ನಾಳೆಯಿಂದ ವರೆಗೆ 0.80 ಟಿಎಂಸಿ ನೀರು ಹರಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ರೈತರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ಅವರು ವಾದ ಮಂಡಿಸಿದರು.
ಮಾರ್ಚ್ 14 ರಂದು ನೀರು ಹರಿಸಲು ಸರ್ಕಾರದ ಸಲಹಾ ಸಮಿತಿ ನಿರ್ಧರಿಸಿತ್ತು. ನಂತರ ನಿಲುವು ಬದಲಿಸಿ ಕೃಷಿಗೆ ನೀರು ಹರಿಸಲು ನಿರಾಕರಿಸಿದೆ. ಕೃಷಿ ಚಟುವಟಿಕೆಗೆ ನೀರು ಹರಿಸಲು ರೈತರು ನಿರ್ದೇಶನ ಕೋರಿದ್ದರು. ಇದರಿಂದ ಈ ಭಾಗದ ಸಾವಿರಾರು ರೈತರಿಗೆ ನಷ್ಟವೆಂದು ವಾದ ಮಂಡಿಸಿದರು. ಏಪ್ರಿಲ್ 4 ರಿಂದ ಏಪ್ರಿಲ್ 6ವರೆಗೆ 0.80 ಟಿಎಂಸಿ ನೀರು ಹರಿಸುವಂತೆ ಈ ವೇಳೆ ಹೈಕೋರ್ಟ್ ನ್ಯಾಯಾಧೀಶರಾದ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.