ಬೆಂಗಳೂರು : ಇನ್ನು ಮುಂದೆ ಬೆಂಗಳೂರಿನಲ್ಲಿ ಫುಟ್ಪಾತ್ ನಲ್ಲಿ ಶಾಪಿಂಗ್ ಮಾಡುವಂತಿಲ್ಲ. ಅದಕ್ಕೆ ಆದಂತಹ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ತಳ್ಳುವ ಗಾಡಿಯ ಮೂಲಕ ವ್ಯಾಪಾರ ನಡೆಸಬೇಕು. ಹಾಗಾಗಿ ಫುಟ್ಪಾತ್ ನಲ್ಲಿ ಶಾಪಿಂಗ್ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಫುಟ್ಪಾತ್ ನಲ್ಲಿ ಶಾಪಿಂಗ್ ನಿಲ್ಲಿಸಬೇಕು ಎಂದು ತೀರ್ಮಾನಿಸಿದ್ದೇವೆ. ತಳ್ಳುವ ಗಾಡಿ ಕೊಡೋಕೆ ಸಿದ್ದರಿದ್ದೇವೆ. ನಿರ್ದಿಷ್ಟವಾದ ಜಾಗದಲ್ಲಿ ಮಾತ್ರ ಮಾರಾಟ ಮಾಡಬೇಕು. ನಾಲ್ಕು ರೀತಿಯ ಗಾಡಿ ಡಿಸೈನ್ ಮಾಡಿದ್ದೇವೆ. 3000ಕ್ಕೂ ಹೆಚ್ಚು ಜನ ಗಾಡಿ ಕೊಡುವಂತೆ ಮನವಿ ಮಾಡಿದ್ದಾರೆ. ಈಗಲೂ ಕೂಡ ಎಚ್ಚರಿಕೆ ನೀಡುತ್ತೇನೆ. ನಾಳೆ ಯಾರು ಒತ್ತಡ ತರದಂತೆ ಶಾಸಕರಿಗೆ ತಿಳಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.