ಜಸ್ದೀಪ್ ಸಿಂಗ್ (36), ಜಸ್ಲೀನ್ ಕೌರ್ (27), ಅವರ ಎಂಟು ತಿಂಗಳ ಮಗಳು ಅರುಹಿ ಧೇರಿ ಮತ್ತು 39 ವರ್ಷದ ಅಮನ್ ದೀಪ್ ಸಿಂಗ್ ಅವರನ್ನು ಅಪಹರಿಸಲಾಗಿದೆ ಎಂದು ಎಬಿಸಿ 10 ವರದಿಯನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಶಂಕಿತನನ್ನು ಶಸ್ತ್ರಸಜ್ಜಿತ ಮತ್ತು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಈ ನಾಲ್ವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣದ ಸ್ಥಳವು ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳಿಂದ ತುಂಬಿರುವ ಪ್ರದೇಶವಾಗಿದೆ. ಶಂಕಿತನ ಹೆಸರು ಮತ್ತು ಅಪಹರಣದ ಉದ್ದೇಶ ಅಧಿಕಾರಿಗಳಿಗೆ ಇನ್ನೂ ತಿಳಿದಿಲ್ಲ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.