ಬೆಂಗಳೂರು : ಕರ್ನಾಟಕದ ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದಂತ ಪ್ರಕರಣದಲ್ಲಿ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿರೋದಾಗಿ ತಿಳಿದು ಬಂದಿದೆ. ಓಂ ಪ್ರಕಾಶ್ ಪುತ್ರಿ ಕೃತಿಯ ಫಿಂಗರ್ ಪ್ರಿಂಟ್ ಪಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದು, ಕೊನೆಗೂ ಆಕೆಯ ಫಿಂಗರ್ ಪ್ರಿಂಟ್ ಪಡೆಯಲು ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿವಾಳ ಎಸಿಪಿ ವಾಸುದೇವ್ ಹೆಗಲಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಓಂ ಪ್ರಕಾಶ್ ಪದ್ಮಿನಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವಿಚಾರಣೆಯ ನಂತರ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಓಂ ಪ್ರಕಾಶ್, ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಂಜೆ ವೇಳೆಗೆ ಪತ್ನಿ ಮತ್ತು ಪುತ್ರಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗುವುದು. ಆಸ್ತಿ ವಿಚಾರಕ್ಕೆ ಪತ್ನಿ ಕೊಲೆ ಮಾಡಿರುವ ಶಂಕೆ ಇದೆ.
ಇದೀಗ ಬೆಂಗಳೂರಿನಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಓಂ ಪ್ರಕಾಶ್ ಪುತ್ರಿ ಕೃತಿಯ ಫಿಂಗರ್ ಪ್ರಿಂಟ್ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಮಹಿಳಾ ಪೊಲೀಸ್ ಸಿಬ್ಬಂದಿ ಸಹಾಯದಿಂದ ಪೊಲೀಸರು ಇದೀಗ ಪುತ್ರಿ ಕೃತಿಯ ಫಿಂಗರ್ ಪ್ರಿಂಟ್ ಪಡೆದಿದ್ದಾರೆ. ಹರಸಹಾಸ ಪಟ್ಟು ಆರೋಪಿ ಕೃತಿ ಫಿಂಗರ್ ಪ್ರಿಂಟ್ ಪಡೆದಿದ್ದಾರೆ ಎನ್ನಲಾಗಿದೆ.