ಶಿವಮೊಗ್ಗ: ಮಾಜಿ ಸಂಸದ ಮುದ್ದಹನುಮೇಗೌಡ ಅವರು ಶೀಘ್ರದಲ್ಲಿಯೇ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಅಂತ ಮಾಜಿ ಸಿಎಂ ಬಿಎಸ್ ಯಡಿಯ್ಯೂರಪ್ಪನವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ ಮುದ್ದೆಹನುಮೇಗೌಡ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಬರಲಿದ್ದು, ಈ ಬಗ್ಗೆ ಅಧಿಕೃತವಾಗಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಅಂತ ಹೇಳಿದರು.
ಇನ್ನೂ ಕುಣಿಗಲ್ ನಲ್ಲಿ ತಮಗೆ ಕಾಂಗ್ರೆಸ್ನಲ್ಲಿ ವಿಧಾನಸಭಾ ಟಿಕೆಟ್ ಸಿಗದೇ ಇರುವುದನ್ನು ಮನಗಂಡ, ಮುದ್ದಹನುಮೇಗೌಡ ಅವರು ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕರ ಜೊತೆಗೆ ಕುಣಿಗಲ್ನಿಂದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು, ಆದರೆ ಸದ್ಯ ಡಿಕೆಶಿ ಸಂಬಂಧಿ ರಂಗನಾಥ್ ಕುಣಿಗಲ್ನಿಂದ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಸದ್ಯ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡುತ್ತಿಲ್ಲ ಎನ್ನಲಾಗಿದೆ.