ಬೆಂಗಳೂರು : ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮ್ಯಾನೇಜರ್ ಗೆ ವಂಚಕನೊಬ್ಬ 6.5 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ.ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುತ್ತೇನೆ ಎಂದು ಹೇಳಿ ಆರೋಪಿ 6.5 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ನಡೆದ ವಂಚನೆ ಪ್ರಕರಣ ಇದೀಗ ತಡವಾಗಿ ಬಳಕೆಗೆ ಬಂದಿದೆ.ಎಂ ಎಸ್ ಧೋನಿ ಮ್ಯಾನೇಜರ್ ಸ್ವಾಮಿನಾಥನ್ ಎಂಬುವವರಿಗೆ ಆರೂವರೆ ಲಕ್ಷ ರೂಪಾಯಿ ವಂಚನೆ ಎಸೆಗಿದ್ದಾನೆ. ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ಪಿಎ ಅಂತ ಹೇಳಿ ಆರೋಪಿ ವಂಚನೆ ಎಸೆಗಿದ್ದಾನೆ ಎಂದು ತಿಳಿದುಬಂದಿದೆ.
ನಾನು ಐಎಎಸ್ ಅಧಿಕಾರಿ ಎಂದು ವಂಚಕ ಸ್ವಾಮಿನಾಥನಿಗೆ ನಂಬಿಸಿದ್ದ ಎನ್ನಲಾಗುತ್ತಿದ್ದು, 12 ಜನರಿಗೆ ವಿಶೇಷ ದರ್ಶನ ಹಾಗೂ ಇರುತ್ತದೆ ಎಂದು ಕೂಡ ಹೇಳಿದ್ದ ಎನ್ನಲಾಗುತ್ತಿದೆ. ನಂತರ ಅಕ್ಟೋಬರ್ 29 ರಂದು ಸಂದೀಪ್ ಹಾಗೂ ಆತನ ಸ್ನೇಹಿತ ಸಲ್ಮಾನ್ ಬೆಂಗಾಲ್ ಹೋಟೆಲ್ನಲ್ಲಿ ಸ್ವಾಮಿನಾಥನ್ ಮತ್ತು ಎಮ್ಎಸ್ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇವೆ ಯಾವಾಗ ಬೇಕಾದರೂ ಕರೆ ಮಾಡಿ ಎಂದು ಹೇಳಿದ್ದಾರೆ. ಬಳಿಕ ನವೆಂಬರ್ 11 ರಂದು ಸಂದೀಪ್ ಸ್ವಾಮಿನಾಥನ್ ಅವರಿಗೆ ಕರೆ ಮಾಡಿ “ವಿಶೇಷ ದರ್ಶನ 12 ಜನರಿಗೆ ನೀಡಲಾಗುವುದು ಎಂದು ತಿಳಿಸಿದ್ದಾನೆ.
ಸ್ವಾಮಿನಾಥನ್ ತಾನು ದುಬೈನಲ್ಲಿದ್ದೇನೆ ಬೇರೆ ಯಾರಿಗಾದರು ನೀಡಿ ಎಂದು ಹೇಳಿದ್ದಾರೆ. ಸಂದೀಪ್ ನೀವೆ ಯಾರಿಗಾದರೂ ಪ್ರೊಟೋಕಾಲ್ ಲೆಟರ್ ನೀಡಿ ಎಂದು ಸ್ವಾಮಿನಾಥನ್ ಅವರಿಗೆ ಅವರಿಗೆ ಹೇಳಿದ್ದಾನೆ. ಆಗ ಸ್ವಾಮಿನಾಥನ್ ಕೂಡ್ಲುಗೇಟ್ನಲ್ಲಿ ಶಾಲೆ ನಡೆಸುತ್ತಿರುವ ತಮ್ಮ ಸ್ನೇಹಿತ ವಿನೀತ್ ಚಂದ್ರಶೇಖರ್ ಅವರಿಗೆ ನೀಡಿ ಎಂದು ಹೇಳಿ ಹೇಳಿದ್ದಾರೆ. ನಂತರ ಡಿಸೆಂಬರ್ 20 ರಂದು ನಾಗೇಶ್ವರ ರಾವ್ ಎಂಬುವರು ವಿನೀತ್ ಚಂದ್ರಶೇಖರ್ ಅವರಿಗೆ ಕರೆ ಮಾಡಿ ತಾನು ಸಚಿವೆ ನಿರ್ಮಲ ಸೀತಾರಾಮನ್ ಅವರ ಪಿಎ ಎಂದು ಹೇಳಿದ್ದಾನೆ.
ಬಳಿಕ ಡೊನೇಷನ್ ಮಾಡಲು ಇಚ್ಛೆಯಿದ್ದಲ್ಲಿ ಸಾಯಿ ಕ್ರಿಯೇಷನ್ ಟ್ರಸ್ಟ್ಗೆ ಹಣ ಹಾಕುವಂತೆ ವಿನೀತ್ ಅವರಿಗೆ ನಾಗೇಶ್ವರ ರಾವ್ ಹೇಳಿದ್ದಾನೆ. ಅದರಂತೆ ವಿನೀತ್ ಅವರು ಡಿಸೆಂಬರ್ 22 ರಂದು 3,33,333 ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾರೆ. ನಂತರ ತಿರುಪತಿ ವಿಶೇಷ ದರ್ಶನ, ರೂಮ್ ಹಾಗೂ ಇತ್ಯಾದಿ ಖರ್ಚುಗಳೆಂದು ಹೇಳಿ 3 ಲಕ್ಷ ರೂ. ಅನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದಾನೆ. ಕೆಲವು ದಿನಗಳ ಬಳಿಕ ಹಣ ಕೇಳಿದರೆ ಕೊಡುತ್ತೇನೆಂದು ಹೇಳುತ್ತಾ ಇದುವರೆಗೂ ಹಣ ನೀಡದೆ ಒಟ್ಟು 6,33,333 ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸ್ವಾಮಿನಾಥನ್ ಅವರು ದೂರು ದಾಖಲಸಿದ್ದಾರೆ.