ಮಂಡ್ಯ : ಈಗಾಗಲೇ ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ಬಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣ ಒಂದೊಂದು ಕಡೆಯಾದರೆ. ಇತ್ತ ಶಾಸಕ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನಡುವೆ ಬಿರುಕು ಮೂಡಿದೆ. ಅಲ್ಲದೆ ಶ್ರೀರಾಮುಲು ಅವರು ಬಿಜೆಪಿ ಪಕ್ಷ ಬಿಡುತ್ತೇನೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ವಿಷಯ ಕೂಡ ಕೇಳಿ ಬರುತ್ತಿದೆ.ಈ ವಿಚಾರವಾಗಿ ಸಚಿವ ಚೆಲುವರಾಯ ಸ್ವಾಮಿ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ತಿಳಿಸಿದರು.
ಈ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರಾಮುಲು ಎಂ.ಪಿ ಚುನಾವಣೆ ವೇಳೆ ಪಕ್ಷಕ್ಕೆ ಬರುತ್ತಾರೆ ಎಂಬ ಚರ್ಚೆ ಆಗಿತ್ತು. ಆಗ ಶ್ರೀರಾಮಲು ಬರಲಿಲ್ಲ ಈಗ ಬರುತ್ತಾರೆ ಇಲ್ಲವೋ ಗೊತ್ತಿಲ್ಲ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ ಇದೆ ಎಂದು ತಿಳಿಸಿದರು.
ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸಂತೋಷ. ಪಕ್ಷಕ್ಕೆ ಬರುವವರ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ. ಒಂದಷ್ಟು ಶಾಸಕರು ಪಕ್ಷಕ್ಕೆ ಬರುತ್ತಾರೆ ಅಂತ ಹೇಳುತ್ತಿದ್ದಾರೆ. ಬಂದರೆ ಯಾವುದೇ ಬೇಜಾರು ಇಲ್ಲ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದರು.