ಉತ್ತರಕನ್ನಡ : ಭಾರತ ಹಾಗೂ ಪಾಕಿಸ್ತಾನದ ನಡುವೆ ಇದೀಗ ಕದನ ವಿರಾಮ ಘೋಷಣೆಯಾಗಿದ್ದು, ಇಂದು ಸಂಜೆ ಭಾರತ ಮತ್ತು ಪಾಕಿಸ್ತಾನದ DGMO ಮಾತುಕತೆ ನಡೆಸಲಿದ್ದಾರೆ. ಇದಕು ಮುನ್ನ ದೇಶದ ಎಲ್ಲೆಡೆ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಮಾಕ್ ಡ್ರಿಲ್ ನಡೆಸಲಾಗಿದೆ. ಇದೀಗ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಆರು ಸ್ಥಳಗಳಲ್ಲಿ ಇಂದು ಮಾಕ್ ಡ್ರಿಲ್ ನಡೆಸಲಾಯಿತು. ಬಿಣಗಾ ಗ್ರಾಮದ ಆದಿತ್ಯ ಬಿರ್ಲಾ ವಸತಿ ಗ್ರಹದಲ್ಲಿ ಮಾರ್ಕ್ ಡ್ರಿಲ್ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ಬಾಂಬ್ ಬಿದ್ದ ವಾತಾವರಣ ಸೃಷ್ಟಿಸಿ ಅಣುಕು ಪ್ರದರ್ಶನ ನಡೆಸಲಾಯಿತು. 40 ಜನರನ್ನು ರಕ್ಷಿಸಿ ಬೈತ್ಕೋಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಅಗ್ನಿಶಾಮಕದಳ ಎನ್ ಡಿ ಆರ್ ಎಫ್ ಮತ್ತು ಪೊಲೀಸರು ರಕ್ಷಿಸಿ ಸ್ಥಳಾಂತರಿಸಿದರು. ಬಾಂಬ್ ಪತ್ತೆ, ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು.
ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಮ್ ಹೂಡಿದ್ದಾರೆ. ಗ್ರಾಸಿನ್ ಕಾರ್ಖಾನೆಯಲ್ಲಿ 23 ನಿಮಿಷ ಕಾರ್ಯಾಚರಣೆ ನಡೆಸಲಾಯಿತು. ಕೈಗಾ, ಮುದುಗ, ಅಮದಳ್ಳಿ, ಕಾರವಾರ ಹರ್ಟುಗಾದಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ. ಬೆಂಕಿ ಅವಘಡ ಮತ್ತು ಸಮುದ್ರ ತೀರದಲ್ಲಿ ಸಾರ್ವಜನಿಕರ ಸ್ಥಳಾಂತರ ಡ್ಯಾಮ್ ನೀರು ಸೋರಿಕೆ ಬ್ಲಾಕ್ ಔಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸ್ಥಳದಲ್ಲಿ
ಇಲಾಖೆಯ ನೂರಾರು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.