ಬೆಂಗಳೂರು : ಕಳೆದ ವರ್ಷ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ, ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಸ್ಕ್ಯಾನಿಂಗ್ ಮಷಿನ್‌ಗಳನ್ನು ಪೂರೈಸಿದ್ದ ಇಬ್ಬರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಬಂಧಿಸಿದೆ.
ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ‘ಜೀವನಾಂಶ’ ನೀಡುವಂತೆ ‘ಪತ್ನಿ’ಗೆ ಕೋರ್ಟ್ ಆದೇಶ
ಮಂಗಳೂರಿನ ಎಂ.ಲಕ್ಷ್ಮಣ್ ಗೌಡ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂ ಕಿನ ಸಿದ್ದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ಸ್ಕ್ಯಾನಿಂಗ್ ಮಷಿನ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದ ಬೆನ್ನತ್ತಿದ್ದ ಎಸ್ಪಿ ಸಾರಾ ಫಾತಿಮಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಇಬ್ಬರು ಸ್ಕ್ಯಾನಿಂಗ್ ಪೂರೈಕೆದಾರರನ್ನು ಬಂಧಿಸಿದೆ.
BREAKING:ಮಹಾರಾಷ್ಟ್ರದ ಮಾಜಿ ಸಿಎಂ ‘ಮನೋಹರ್ ಜೋಶಿ’ ನಿಧನ | Manohar Joshi Passes Away
ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸ್ಕ್ಯಾನಿಂಗ್ ಪೂರೈಕೆದಾರರ ಲಭ್ಯವಾದ ಮಾಹಿತಿ ಮೇರೆಗೆ ಸಿಐಡಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಕೊಲ್ಲುವ ದುಷ್ಟರ ಜಾಲವನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀ ಸರು ಪತ್ತೆ ಹಚ್ಚಿದ್ದರು. ಸಾರ್ವಜನಿಕ ವಲಯ ದಲ್ಲಿ ತೀವ್ರ ಚರ್ಚೆಗೆ ಒಳಗಾದ ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.