ಚಂಡೀಗಢ : ಲೈಂಗಿಕ ಕಿರುಕುಳ ಕೇವಲ ಸ್ಪರ್ಶ ದಿಂದ ಮಾತ್ರವೇ ಆಗಬೇಕಿಲ್ಲ ‘ಪ್ರೈಯಿಂಗ್ ಕಿಸ್, ಕಣ್ಣು ಹೊಡೆಯುವುದು ಕೂಡ ಲೈಂಗಿಕ ಕಿರುಕುಳವೆಂದೇ ಆಗುತ್ತದೆ. ಅದು ಮಹಿಳೆಯ ಘನತೆಗೆ ಧಕ್ಕೆ ಎಂದು ಚಂಡೀಗಢ ಕೋರ್ಟ್ ವ್ಯಕ್ತಿಯೋರ್ವನಿಗೆ 10,000 ರು. ದಂಡ ಹಾಕಿದೆ.
2021ರಲ್ಲಿ ಮನೆಯ ಮುಂದೆ ಕಸ ಗುಡಿಸುವ ವೇಳೆ ಅಶೋಕ್ ಕುಮಾರ್ ಎಂಬಾತ 500 ರು. ನೋಟು ಬಿಸಾಡಿ, ಫೈಯಿಂಗ್ ಕಿಸ್ ಕೊಟ್ಟಿದ್ದಾನೆ. ಇದನ್ನು ವಿರೋಧಿಸಿ ಮಹಿಳೆ ಅಶೋಕ್ ಮನೆಗೆ ತೆರಳಿದಾಗ, ಅಸಭ್ಯ ಚಿಹ್ನೆ ತೋರಿ ದುರ್ವತನೆ ಮೆರೆದಿದ್ದಾನೆ. ಪರಿಣಾಮ ಮಹಿಳೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಅಶೋಕ್ ಕುಮಾರ್ ಪರ ವಕೀಲರು, ಅಶೋಕ್ ಐಸ್ ತರಲು ದುಡ್ಡ ತೆಗೆದಾಗ 500 ರು. ನೋಟು ಬಿದ್ದಿತ್ತು ಎಂದು ವಾದಿಸಿದ್ದಾರೆ. ಆದರೆ ಇದನ್ನು ಒಪ್ಪದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ನೋಟು ಬಿಸಾಡುವುದು, ಅಸಭ್ಯ ಚಿಹ್ನೆಗಳನ್ನು ತೋರುವುದು, ಫೈಯಿಂಗ್ ಕಿಸ್ ಕೊಡುವುದೂ ಸಹ ಕಿರುಕುಳವೆಂದೇ ಪರಿಗಣಿಸಲಾಗುತ್ತದೆ ಎಂದಿದೆ. ದೋಷಿಯಂದು 20,000 ರು. ಶೂರಿಟಿ ಬಾಂಡ್ ಪಡೆದು, 10,000 ರು. ದಂಡ ಹಾಕಿದೆ.








