ಚಿತ್ರದುರ್ಗ : ಅಕ್ರಮವಾಗಿ ಟಾಸಿಕ್ಸ್ ಸಿರಪ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಚಿತ್ರದುರ್ಗದ ಸೆನ್ ಠಾಣೆಯ ಪೊಲೀಸರಿಂದ ಐವರು ಆರೋಪಿಗಳ ಬಂಧನ ಆಗಿದೆ.
ಚಿತ್ರದುರ್ಗದ ಸೈಯದ್ ಸಾದತ್, ಇಮ್ರಾನ್ ಭಾಷಾ, ಸಾಧಿಕ್ ಉಲ್ಲಾ, ಆಂಧ್ರ ಮೂಲದ ಹನುಮರೆಡ್ಡಿ ಮತ್ತು ಬಳ್ಳಾರಿಯ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತರಿಂದ ಟಾಸಿಕ್ಸ್ ಸಿರಪ್, 1 ಆಟೋ, 3 ಮೊಬೈಲ್ ಹಾಗು 2500 ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದ ಸೆನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.