ಕೊಡಗು / ವಿಯಪುರ : ಮಾರ್ಚ್ ಆರಂಭದಲ್ಲೇ ರಾಜ್ಯದಲ್ಲಿ ಸೂರ್ಯನ ಬಿಸಿಲಿನಿಂದ ಜನರು ಕಂಗೆಟ್ಟು ಹೋಗಿದ್ದರು ಆದರೆ ಇತ್ತೀಚಿಗೆ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆಗುತ್ತಿರುವುದರಿಂದ ಜನ ಸ್ವಲ್ಪಮಟ್ಟಿಗೆ ಸೂರ್ಯನ ಶಾಖದಿಂದ ದೂರ ಉಳಿದಂತೆ ಆಗಿದೆ. ಇದೀಗ ಕೊಡಗು ಮತ್ತು ವಿಜಯಪುರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.
ಹೌದು ಕೊಡಗು ಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆಯಾಗಿದ್ದು, ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಡಿಕೇರಿ ನಗರ ಸೇರಿದಂತೆ ಹಲವಡೆ ಆಲಿಕಲ್ಲು ಮಳೆಯಾಗಿದೆ. ಉತ್ತಮ ಮಳೆಯಿಂದ ಕಾಫಿ ಬೆಳೆಗಾರರಲ್ಲಿ ಇದೀಗ ಮಂದಹಾಸ ಮೂಡಿದೆ.
ಇನ್ನು ಎಚ್ಎಸ್ ಸಂಗಾಪುರ ದಲ್ಲೂ ಕೂಡ ಆಲಿಕಲು ಸಹಿತ ಮಳೆಯಾಗಿದೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರದಲ್ಲಿ ಗುಡುಗು ಮಿಂಚು ಸಹಿತ ಅರ್ಧ ಗಂಟೆವರೆಗೂ ಆಲಿಕಲ್ಲು ಮಳೆಯಾಗಿದೆ. ಬಿಸಿಲಿನ ಜಳದಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಮಳೆರಾಯ ತಂಪೆರೆದಿದ್ದಾನೆ. ಆಲಿಕಲ್ಲು ಮಳೆಯಿಂದ ತೋಟಗಾರಿಗೆ ಬೆಳೆಗೆ ಹಾನಿ ಹಾಗೂ ಆತಂಕ ಎದುರಾಗಿದೆ. ದ್ರಾಕ್ಷಿ, ದಾಳಿಂಬೆ ಹಾಗೂ ನಿಂಬೆ ಬೆಳೆಗಾರರಲ್ಲಿ ಇದೀಗ ಆತಂಕ ಮನೆ ಮಾಡಿದೆ.