ಬೆಂಗಳೂರು : ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವೃದ್ಧರೊಬ್ಬರೂ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. ಮೃತ ವೃದ್ಧರನ್ನು ಮೈಲಾರಪ್ಪ (80) ತಿಳಿದು ಬಂದಿದೆ.
ಮನೆಯಲ್ಲಿ ಮೊಮ್ಮಗನ ಜೊತೆಗೆ ಮೈಲಾರಪ್ಪ ವಾಸವಿದ್ದರು. ಮೊಮ್ಮಗ ಮನೆಯಿಂದ ಹೊರ ಹೋಗಿದ್ದಾಗ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಮನೆಯಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ಮೈಲಾರಪ್ಪ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ತಳಕ್ಕೆ ಕೆಂಗೇರಿ ತಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.








