ಬೆಂಗಳೂರು : ಸಚಿವ ಈಶ್ವರ್ ಖಂಡ್ರೆ ಪುತ್ರ ಹಾಗು ಕಾಂಗ್ರೆಸ್ ಸಂಸದ ಸಾಗರ್ ಖಂಡ್ರೆ ಅವರ ಬೆಂಗಳೂರಿನ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕೃಷ್ಣ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮನೆ ನವೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹೌದು ಶ್ರೀ ಕೃಷ್ಣ ಅರ್ಪಾಟಮೆಂಟ್ ನಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಪುತ್ರ ಹಾಗೂ ಸಂಸದ ಸಾಗರ ಖಂಡ್ರೆ ವಾಸವಾಗಿದ್ದಾರೆ. ಪ್ರಸ್ತುತ ಈ ಮನೆಯನ್ನು ಕೃಷ್ಣ ಅರ್ಪಾಟಮೆಂಟ್ಸೊ ಸೈಟಿಯಿಂದ ಪೂರ್ವಾನುಮತಿಯನ್ನು ಪಡೆದುಕೊಂಡು ನವೀಕರಣಮಾಡಲಾಗುತ್ತಿದೆ. ನವೀಕರಣದ ವೇಳೆ ಮೆಟ್ಟಿಲುಗಳಿಗೆ ಬೆಳಕಿನ ವ್ಯವಸ್ಥೆ ಮಾಡಲು ವೈರ್ನ್ನು ಎಳೆಯಲಾಗಿದೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ಏಪ್ರಿಲ್ 2 ರಂದು ಮಧ್ಯಾಹ್ನ ಸುಮಾರು 04:30 ಗಂಟೆ ಸಮಯದಲ್ಲಿ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ ಎಂಬುವರು ನವೀಕರಣ ಕಾಮಗಾರಿ ಮಾಡುತ್ತಿರುವ ಕಾರ್ಮಿಕರನ್ನು ಅಡ್ಡಗಟ್ಟಿ, ಕಾರ್ಮಿಕರಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದಿದ್ದಾರೆ.ಈ ಬಗ್ಗೆ ಮನೆಯ ಮಾಲೀಕ ಸಾಗರ ಖಂಡ್ರೆ ಅಥವಾ ಈಶ್ವರ ಖಂಡ್ರೆ ಅಥವಾ ಅವರ ಕುಟುಂಬ ಸದಸ್ಯರಿಗಾಗಲಿ ಅಥವಾ ಸಚಿವರ ಆಪ್ತ ಸಹಾಯಕರಿಗೆ ಮಾಹಿತಿ ನೀಡದೆ ಏಕಾಏಕಿ ಮನೆಯ ವಿದ್ಯುತ್ ಸಂಪರ್ಕವನ್ನು ಖಡಿತಗೊಳಿಸಲಾಗಿದೆ