ಬೆಂಗಳೂರು : ಬೆಂಗಳೂರಿನಲ್ಲಿ ಒಂದು ವಿಚಿತ್ರವಾದಂತ ಘಟನೆ ನಡೆದಿದ್ದು, ಬೆಕ್ಕಿನ ಮರಿ ಒಂದು ಕೇವಲ ಮೂತ್ರ ಮಾಡಿದ್ದಕ್ಕೆ ವ್ಯಕ್ತಿ ಒಬ್ಬ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಇದೀಗ ಬೆಕ್ಕಿನ ಮರಿಗೆ ಒದ್ದವನ ವಿರುದ್ಧ ವ್ಯಕ್ತಿ ಒಬ್ಬರು ಮೈಕೋ ಲೇಔಟ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹೌದು ಈ ಒಂದು ಘಟನೆ ನಡೆದಿದ್ದು, ಬೆಂಗಳೂರಿನ ಬಿಟಿಎಂ ಲೆಔಟ್ ನಲ್ಲಿ ನಡೆದಿದ್ದು, ಮೊಹಮ್ಮದ್ ಅಫ್ತಾಬ್ ನೀಡಿರುವ ದೂರಿನ ಮೇರೆಗೆ ಮನೀಶ್ ರತ್ನಾಕರ್ ಎನ್ನುವವರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಸೆಕ್ಷನ್ 325ರಡಿ ಎಫ್‌ಐಆರ್ ದಾಖಲಾಗಿದೆ.
ದೂರುದಾರ ಮೊಹಮ್ಮದ್ ಅಫ್ತಾಬ್ ಹಾಗೂ ಆರೋಪಿ ಮನೀಶ್ ರತ್ನಾಕರ್ ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ನವೆಂಬರ್ 26ರಂದು ಮನೀಶ್ ರತ್ನಾಕರ್ ಮನೆಯಲ್ಲಿದ್ದಾಗ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಮನೀಶ್, ಬೆಕ್ಕಿಗೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ.
ಬಳಿಕ ಮೊಹಮ್ಮದ್ ಅಫ್ತಾಬ್‌ಗೆ ಕರೆ ಮಾಡಿ, ಬೆಕ್ಕು ಮನೆಯಲ್ಲಿ ಗಲೀಜು ಮಾಡಿದೆ, ಅದನ್ನು ಹೊರಗೆ ಬಿಸಾಡು ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಮೊಹಮ್ಮದ್ ಅಫ್ತಾಬ್ ಮನೆಗೆ ಬಂದು ನೋಡಿದಾಗ ಬೆಕ್ಕು ಬಕೆಟ್‌ನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂಬ ಉಲ್ಲೇಖವೂ ಇದೆ.