ಬೆಂಗಳೂರು : ಚಲಿಸುತ್ತಿದ್ದ ವಿಮಾನದಲ್ಲಿ ಗಗನಸಖಿಯಿಂದಲೇ ಮಗುವಿನ ಚಿನ್ನ ಕಳ್ಳತನ ಆರೋಪ ಕೇಳಿ ಬಂದಿದ್ದು, ಈ ಕುರಿತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಹಿಳೆಯೊಬ್ಬರು ದೂರು ನೀಡಿದ್ದು, ಇದೀಗ ಇಂಡಿಗೋ ವಿಮಾನದ ಸಿಬ್ಬಂದಿ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೌದು ಇಂಡಿಗೋ ವಿಮಾನದ ಮಹಿಳಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕೆಂಪೇಗೌಡ ಏರ್ಪೋರ್ಟ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮಗುವಿನ ತಾಯಿಯ ದೂರಿನ ಮೇರೆಗೆ ಫ್ಲೈಟ್ ಸಿಬ್ಬಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಏಪ್ರಿಲ್ 1ರಂದು ತಿರುವನಂತಪುರಂ ನಿಂದ ದೂರುದಾರೆ ಮಹಿಳೆ ಪ್ರಿಯಾಂಕಾ ಮುಖರ್ಜಿ ಬೆಂಗಳೂರಿಗೆ ಬಂದಿದ್ದರು.
ಇಬ್ಬರು ಚಿಕ್ಕ ಮಕ್ಕಳ ಜೊತೆಗೆ ಮಹಿಳೆ ಪ್ರಿಯಾಂಕ ಮುಖರ್ಜಿ ಪ್ರಯಾಣ ಮಾಡಿದ್ದರು. ಮಗು ಅಳುತ್ತಿದ್ದ ಅಂತ 5 ವರ್ಷದ ಮಗುವನ್ನು ಗಗನಸಖಿ ಎತ್ತಿಕೊಂಡಿದ್ದರು. ಮಗುವನ್ನು ವಾಷ್ ರೂಮ್ ಕಡೆ ಎತ್ತಿಕೊಂಡು ಹೋಗಿ ಸರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿಲಾಗಿದ್ದು, ಇಂಡಿಗೋ ವಿಮಾನದ ಸಿಬ್ಬಂದಿ ಅದಿತಿ ಅಶ್ವಿನಿ ಶರ್ಮಾ ವಿರುದ್ಧ ತಾಯಿ ಪ್ರಿಯಾಂಕಾ ಮುಖರ್ಜಿ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಏರ್ಪೋರ್ಟ್ ಠಾಣೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.