Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರು ತಮ್ಮ ‘ಚಿನ್ನ’ವನ್ನ ಪ್ರತಿ ಮನೆ ಮನೆಗೆ ಹಂಚಿದ್ರೆ ನಿಮಗೆಷ್ಟು ಸಿಗುತ್ತೆ ಗೊತ್ತಾ.?

10/02/2026 10:02 PM

ಒಂದು ಕಿಲೋ ತೂಕ ಇಳಿಸಿಕೊಳ್ಳಲು ನೀವೆಷ್ಟು ಹೆಜ್ಜೆ ನಡೆಯ್ಬೇಕು ಗೊತ್ತಾ.? ಈ ಲೆಕ್ಕಾಚಾರ ತಿಳಿದ್ರೆ, ನೀವೇ ಶಾಕ್ ಆಗ್ತೀರಾ!

10/02/2026 9:51 PM

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಗ್ಯಾರಂಟಿ’ ಮೂಲಕ ರಾಜ್ಯದ 1.20 ಲಕ್ಷ ಕುಟುಂಬಗಳಿಗೆ ಪ್ರತಿ ವರ್ಷ 60 ಸಾವಿರ ರೂ.ವರೆಗೆ ಆರ್ಥಿಕ ಸಹಾಯ : CM ಸಿದ್ದರಾಮಯ್ಯ
KARNATAKA

BIG NEWS : `ಗ್ಯಾರಂಟಿ’ ಮೂಲಕ ರಾಜ್ಯದ 1.20 ಲಕ್ಷ ಕುಟುಂಬಗಳಿಗೆ ಪ್ರತಿ ವರ್ಷ 60 ಸಾವಿರ ರೂ.ವರೆಗೆ ಆರ್ಥಿಕ ಸಹಾಯ : CM ಸಿದ್ದರಾಮಯ್ಯ

By kannadanewsnow5714/09/2024 9:17 AM

ರಾಮನಗರ : ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರಾಜ್ಯದ ಸುಮಾರು 1.20 ಲಕ್ಷ ಕುಟುಂಬಗಳಿಗೆ ವಾರ್ಷಿಕವಾಗಿ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಗ್ಯಾರಂಟಿಗಳ ಮೂಲಕ ಒದಗಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾಗಡಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ಶಿಬಿರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದವರು. ಅವರ ಜಯಂತ್ಯೋತ್ಸವವನ್ನು ಆಚರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ 2016-17 ರಲ್ಲಿ ಆಚರಣೆಗೆ ತಂದಿದ್ದು ನಮ್ಮ ಸರ್ಕಾರ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು BJP Karnataka ಪಕ್ಷದವರು ಆರೋಪಿಸುತ್ತಿದ್ದಾರೆ. ಹಾಗಾದರೆ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂ.ಗಳ ಅನುದಾನವನ್ನು ಹೇಗೆ ಮೀಸಲಿಡಲಾಗಿದೆ ಎಂದು ಹೇಳಲಿ?

ಬಿಜೆಪಿಯವರು ಹಾಲಿಗೆ ಬೆಲೆ ಏರಿಸಲಾಗಿದೆ ಎಂದು ಆರೋಪಿಸಿದರು, ರೈತರಿಗೆ ಹಾಲು ಖರೀದಿಸಿ, ಅವರಿಗೆ ಹಣ ನೀಡುವುದು ಬೇಡವೇ? ಹಾಲಿನ ಪ್ರಮಾಣ ಹೆಚ್ಚಿಸಿ, ಅದಕ್ಕೆ ಸಮನಾಗಿ ಬೆಲೆ ಹೆಚ್ಚಿಸಿ ರೈತರಿಗೆ ನೆರವಾಗಿದ್ದು ತಪ್ಪಾ? ಹಾಲಿಗೆ 5.೦೦ ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ಕೆಲವರು ತಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ.

ನೆಹರೂ, ಇಂದಿರಾಗಾಂಧಿ ಸೇರಿದಂತೆ ಹಲವು ನಾಯಕರು ದೇಶಕ್ಕಾಗಿ ದುಡಿದಿದ್ದಾರೆ. Narendra Modi ಸುಳ್ಳು ಹೇಳುತ್ತಾರೆ ಎಂದು ಈ ಬಾರಿ ಮೋದಿಯವರಿಗೆ ನೀವು ವೋಟು ನೀಡಿದ್ದೀರ? ಭಾರತದ ಮೇಲಿನ ಸಾಲ 182 ಲಕ್ಷ ಕೋಟಿಯನ್ನು ಮೀರುತ್ತಿದೆ. ಹಿಂದೆ ಸಾಲದ ಮೊತ್ತ 53.11 ಲಕ್ಷ ಕೋಟಿ ಇತ್ತು, ಕಳೆದ 10 ವರ್ಷದಲ್ಲಿ 182 ಲಕ್ಷ ಕೋಟಿ ರೂ.ಗೆ ತಲುಪಿದೆ. ಗರೀಬಿ ಹಠಾವೋ, ಆಹಾರ ಸ್ವಾವಲಂಬನೆಯಂತ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದ್ದರೆ, ಮೋದಿ ಸರ್ಕಾರ ಜನರ ತಲೆಗೆ ಸಾಲವನ್ನು ಹೇರಿದೆ ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಸುಳ್ಳು ಹಬ್ಬಿಸಿದರು, ಕೊನೆಗೆ ನಾವು ಜನರಿಗೆ ಸತ್ಯ ತಿಳಿಸಿದೆವು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89.62 ಕೋಟಿ ಮೊತ್ತದ ಅವ್ಯವಹಾರವಾಗಿದ್ದು, ಅದರಲ್ಲಿ 56 ಕೋಟಿ ವಸೂಲು ಮಾಡಲಾಗಿದೆ. ಆದರೂ ಅಭಿವೃದ್ಧಿ ನಿಗಮಕ್ಕೆ ಈ ಮುಂಚೆ ನಿಗದಿಪಡಿಸಿರುವಂತೆ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

000 per year to 1.20 lakh families in the state through 'guarantee': CM Siddaramaiah BIG NEWS: FINANCIAL ASSISTANCE UP TO Rs 60
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM1 Min Read

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM2 Mins Read

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM1 Min Read
Recent News

ಭಾರತೀಯರು ತಮ್ಮ ‘ಚಿನ್ನ’ವನ್ನ ಪ್ರತಿ ಮನೆ ಮನೆಗೆ ಹಂಚಿದ್ರೆ ನಿಮಗೆಷ್ಟು ಸಿಗುತ್ತೆ ಗೊತ್ತಾ.?

10/02/2026 10:02 PM

ಒಂದು ಕಿಲೋ ತೂಕ ಇಳಿಸಿಕೊಳ್ಳಲು ನೀವೆಷ್ಟು ಹೆಜ್ಜೆ ನಡೆಯ್ಬೇಕು ಗೊತ್ತಾ.? ಈ ಲೆಕ್ಕಾಚಾರ ತಿಳಿದ್ರೆ, ನೀವೇ ಶಾಕ್ ಆಗ್ತೀರಾ!

10/02/2026 9:51 PM

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM

128 ವರ್ಷಗಳಷ್ಟು ಹಳೆಯದಾದ ರಾಜಮನೆತನದ ಮೆನು ವೈರಲ್: 1897ರಲ್ಲಿ ಮಹಾರಾಜ ಊಟ ಹೇಗಿತ್ತು ಗೊತ್ತಾ?

10/02/2026 9:21 PM
State News
KARNATAKA

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

By kannadanewsnow0910/02/2026 9:33 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಂತ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ…

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM

ಫೆ.14ರಂದ ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ: ಸಚಿವ ಈಶ್ವರ ಖಂಡ್ರೆ

10/02/2026 8:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.