ಬೆಂಗಳೂರು : ಇದೇ ಫೆಬ್ರವರಿ 8ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಗೆ ನಟ ಕಿಚ್ಚ ಸುದೀಪ್ ಅವರು ಭೇಟಿ ನೀಡಿ ಆಹ್ವಾನಿಸಿದ್ದಾರೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ಸಿಸಿಎಲ್ 11ನೇ ಆವೃತ್ತಿ ಉದ್ಘಾಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸುದೀಪ ಅವರು ಆಹ್ವಾನ ನೀಡಿದ್ದಾರೆ. ಫೆಬ್ರವರಿ 8 ರಿಂದ ಬೆಂಗಳೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಫೆಬ್ರವರಿ 8ರಿಂದ ಈ ಒಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿವೆ.
ಫೆಬ್ರವರಿ 8 ಮತ್ತು 9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.ಮೊದಲ ಪಂದ್ಯ ಕರ್ನಾಟಕದ ಮತ್ತು ಹೈದ್ರಾಬಾದ್ ನಡುವೆ ನಡೆಯಲಿದೆ.ಅನೂಪ್ ಭಂಡಾರಿ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಕೂಡ ನಟ ಸುದೀಪ್ ಕಾರಿನಲ್ಲೇ ತೆರಳಿದರು.
The new season is upon us, and the excitement is palpable as #CCLSeason11 kicks off in #NammaBengaluru.
Join us at KSCA on February 8th at 6 PM to support our very own ##KarnatakaBulldozers as we take on the ever-energetic #TeluguWarriors.
Looking forward to seeing all of you… pic.twitter.com/lXLwVKyK4l— Kichcha Sudeepa (@KicchaSudeep) February 4, 2025