ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಕಳಸ ಪಟ್ಟಣದ ಮಾವಿನಕೆರೆ ಎಂಬ ಗ್ರಾಮದಲ್ಲಿ ನಿನ್ನೆ ಕಾಡುಕೋಣ ದಾಳಿಗೆ ರೈತ ರಘುಪತಿ ಎನ್ನುವವರು ಸಾವನ್ನಪ್ಪಿದ್ದರು. ಚಿಕ್ಕಮಂಗಳೂರು ಜಿಲ್ಲೆಯ ಕಳಸ ಪಟ್ಟಣದ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರಿಂದ ಇಂದು ಕಳಸ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.
ಹೌದು ಕಳಸ ವ್ಯಾಪಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರಿಂದ ಇಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ರೈತ ಸಂಘ, ಸರ್ವಪಕ್ಷಗಳಿಂದ ಕಳಸ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 4 ರ ವರೆಗೂ ಕಳಸ ಪಟ್ಟಣ ಬಂದ್ ಗೆ ಸಂಘಟನೆಗಳು ಕರೆ ನೀಡಿವೆ.
ಕಾಡುಕೋಣ ದಾಳಿಯಿಂದ ರೈತ ರಘುಪತಿ ಮೃತಪಟ್ಟಿದ್ದರು. ಮಾವಿನಕೆರೆ ಗ್ರಾಮದಲ್ಲಿ ಕಾಡುಕೋಣ ದಾಳಿಗೆ ರೈತ ಬಲಿಯಾಗಿದ್ದರು.ಹಾಗಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳ ಸ್ಥಳಾಂತರ ಮತ್ತು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಇಂದು ಕಳಸ ಪಟ್ಟಣ ಬಂದ್ ಗೆ ಕರೆ ನೀಡಿದ್ದಾರೆ.
ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ
ಕಳಸದಲ್ಲಿ ಕಾಡುಕೋಣ ದಾಳಿಗೆ ರೈತ ರಘುಪತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೃತ ರಘುಪತಿ ಕುಟುಂಬಕ್ಕೆ ಅರಣ್ಯ ಇಲಾಖೆ 15ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದೆ. ರಾತ್ರಿ ಕುಟುಂಬಸ್ಥರಿಗೆ ಅರಣ್ಯ ಇಲಾಖೆ ಈ ಒಂದು ಪರಿಹಾರದ ವಿತರಿಸಿದೆ.
ಕಾಡುಕೋಣ ದಾಳಿಯಿಂದ ರೈತರ ರಘುಪತಿ ಮೃತಪಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಕಾಡುಕೋಣ ದಾಳಿಗೆ ರಘುಪತಿ ಮೃತಪಟ್ಟಿದ್ದರು. ದಿಗಂಬರ್ಧ ಕುಟುಂಬಸ್ಥರಿಗೆ ಅರಣ್ಯ ಇಲಾಖೆ 15ಲಕ್ಷ ಪರಿಹಾರ ವಿತರಿಸಿದೆ.