ತುಮಕೂರು : ಸಿದ್ದಗಂಗಾ ಮಠದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಮಠದ ಹೆಸರು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.
ಮಠದ ಹೆಸರಿನಲ್ಲಿ ಬಂಜೆತನಕ್ಕೆ ಎಂದು ನಕಲಿ ಔಷಧಿ ವಿತರಣೆ ಮಾಡಲಾಗುತ್ತಿದ್ದು, ನಕಲಿ ಔಷಧ ಕೊಟ್ಟು ಕಿಡಿಗೇಡಿಗಳು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ದೇಣಿಗೆ ಸಂಗ್ರಹಕ್ಕೆ ಮಠದಿಂದ ಯಾರನ್ನು ನೇಮಿಸಿಲ್ಲ ಔಷಧಿ ವಿತರಣೆಯು ಮಾಡುತ್ತಿಲ್ಲ ಎಂದು ಸಿದ್ದಗಂಗಾ ಮಠ ಸ್ಪಷ್ಟಪಡಿಸಿದೆ.








