ಬೆಂಗಳೂರು : ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿ ಮಾಡಲಾಗಿದೆ. ಕಮಿಷನರ್ ಸೀಮಂತ ಕುಮಾರ್ ಸಿಂಗ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಲಾಗಿದೆ.
ಗಣ್ಯರ ಜೊತೆಗೆ ಇರುವ ಫೋಟೋ ಪೋಸ್ಟ್ ಮಾಡಿ ನಕಲಿ ಖಾತೆ ಸೃಷ್ಟಿ ಮಾಡಿದ್ದು ಹಿಂದಿ ಭಾಷೆಯ ಹೆಸರು ಇರುವ ಖಾತೆ ರಚನೆ ಮಾಡಿ ವಂಚನೆಗೆ ಯತ್ನಿಸಿದ್ದಾರೆ. ತಪ್ಪು ಸಂದೇಶ ನೀಡುವ ಮೆಸೇಜ್ ಮಾಡಿ ವಂಚಕರು ದಾರಿ ತಪ್ಪಿಸುತ್ತಿದ್ದಾರೆ ಆಯುಕ್ತರೆ ಪೋಸ್ಟ್ ಮಾಡುತ್ತಿದ್ದಾರೆ ಎಂದು ನಂಬಿ ಜನರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಮೊದಲು ನಂಬಿಸಿ ನಂತರ ಹಣ ದೋಚುವ ಉದ್ದೇಶದಿಂದ ಖಾತೆ ರಚನೆ ಮಾಡಿದ್ದಾರೆ ಈ ಹಿಂದೆ ಆಲೋಕ ಕುಮಾರ್ ಹಾಗು ಭೀಮಶಂಕರ ಹೆಸರಿನಲ್ಲಿ ಕೂಡ ಖಾತೆ ಸೃಷ್ಟಿ ಮಾಡಲಾಗಿದ್ದು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಕಿಡಿಗೇಡಿಗಳು ವಂಚನೆಗೆ ಯತ್ನಿಸುತ್ತಿದ್ದಾರೆ ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








