Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

VIDEO : ‘ಮಧ್ಯಸ್ಥಿಕೆಗಾಗಿ ಮೋದಿಗೆ ಕರೆ ಮಾಡಿ, ಅವ್ರಿಗೆ ಇರಾನ್ ಜೊತೆ ಉತ್ತಮ ಸಂಬಂಧವಿದೆ’ : ‘ಟ್ರಂಪ್’ಗೆ ಅಮೆರಿಕದ ಮಾಜಿ ಕರ್ನಲ್ ಸಲಹೆ

12/03/2026 10:20 PM

ಯುದ್ಧದಿಂದಾಗಿ ಜಗತ್ತು ತೀವ್ರ ಇಂಧನ ಬಿಕ್ಕಟ್ಟು ಎದುರಿಸ್ತಿದೆ, ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡ್ತಿದೆ : ಪ್ರಧಾನಿ ಮೋದಿ

12/03/2026 10:11 PM

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಜರಾತಿಗೆ `ಫೇಸ್ ರೆಕಗ್ನಿಶನ್’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಜರಾತಿಗೆ `ಫೇಸ್ ರೆಕಗ್ನಿಶನ್’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

By kannadanewsnow5718/02/2026 6:49 AM

ಬೆಂಗಳೂರು : ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಮುಖ ಗುರುತಿನ ಹಾಜರಾತಿ ವ್ಯವಸ್ಥೆಯನ್ನು 2026-27ನೇ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.

ಶಿಕ್ಷಕರ ಡಿಜಿಟಲ್ ಹಾಜರಾತಿಗೆ ಈಗಾಗಲೇ ಆದೇಶ ಮಾಡಲಾಗಿದ್ದು, ಅದನ್ನು ಸಮರ್ಪ ಕವಾಗಿ ಈ ಸಾಲಿನಿಂದಲೇ ಜಾರಿಗೊಳಿಸಬೇಕು.ಬರುವ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಡಿಜಿಟಲ್ ಹಾಜರಾತಿ ಪ್ರಕ್ರಿಯೆ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?

ಮೇಲೆ ಓದಲಾದ ಕ್ರಮಾಂಕ (1)ರಲ್ಲಿ, 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಘೋಷಣೆಯ ಕಂಡಿಕೆ-112ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.

“ನಿರಂತರ’ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.”

ಮೇಲೆ ಓದಲಾದ ಕ್ರಮಾಂಕ (2) ರಲ್ಲಿ, ‘ನಿರಂತರ’ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಲೆಕ್ಕ ಶೀರ್ಷಿಕೆ 4202-01-201-1-04- ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಮೂಲಭೂತ ಸೌಕರ್ಯ (177-ಐಟಿ ವೆಚ್ಚ – 500.00 ಲಕ್ಷಗಳು) ಒಟ್ಟು – 500.00 ಲಕ್ಷಗಳನ್ನು ನಿಗದಿಪಡಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3) ರ ಸರ್ಕಾರಿ ಆದೇಶದಲ್ಲಿ 2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಕಂಡಿಕೆ -112 ರಲ್ಲಿ “ನಿರಂತರ ជ ಮೊಬೈಲ್ ಆಧಾರಿತ ಅಲ್-ಡ್ರೈವನ್ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ

ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ KTPP ನಿಯಮಗಳಂತೆ ಟೆಂಡರ್ ಆಹ್ವಾನಿಸಿ ಅನುಷ್ಠಾನ ಮಾಡಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿಸಿ ಆದೇಶಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ, ಮೇಲೆ ಓದಲಾದ ಕ್ರಮಾಂಕ (4)ರ ಸಭೆಯಲ್ಲಿ ಇ-ಆಡಳಿತ ಕೇಂದ್ರವೂ (CeG) ಈಗಾಗಲೇ ಎಲ್ಲಾ ಸರ್ಕಾರಿ ಸಿಬ್ಬಂದಿಗಳಿಗೆ ಎಐ ಆಧಾರಿತ ಹಾಜರಾತಿ ವ್ಯವಸ್ಥೆಯ ಅಭಿವೃದ್ಧಿ ಪಡಿಸಿದ್ದು, ಶಾಲಾ ಶಿಕ್ಷಣಯ ಇಲಾಖೆಯ ಅವ್ಯಕತೆಯ ಅನುಗುಣವಾಗಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಒದಗಿಸುವಂತೆ ಸೂಚಿಸಲಾಗಿತ್ತು. ಸದರಿ ಸಭೆಯಲ್ಲಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆಗೆ ಸಂಬಂಧಿಸಿದ ಅಭಿವೃದ್ಧಿ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ವಿದ್ಯಾರ್ಥಿಗಳ ದತ್ತಾಂಶವನ್ನು ಇ-ಆಡಳಿತ ಕೇಂದ್ರದೊಂದಿಗೆ (CeG) ಹಂಚಿಕೊಳ್ಳುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಸೂಚಿಸಲಾಯಿತು.

ಮೇಲೆ ಓದಲಾದ ಕ್ರಮಾಂಕ (5)ರಂತೆ, ಇ-ಆಡಳಿತ ಕೇಂದ್ರ (CeG) ರವರು ಶಾಲಾ ಶಿಕ್ಷಣ ಇಲಾಖೆಯ ಎ.ಐ. ಆಧಾರಿತ ವಿದ್ಯಾರ್ಥಿಗಳ ಮುಖ ಚಹರೆ ಹಾಜರಾತಿ ಮೇಲ್ವಿಚಾರಣಾ ಅಪ್ಲಿಕೇಶನ್‌ 6 ತಿಂಗಳ ಅಭಿವೃದ್ಧಿ ಹಾಗೂ 6 ತಿಂಗಳ ನಿರ್ವಹಣೆ ಮತ್ತು ಮೂಲಸೌಕರ್ಯ ವೆಚ್ಚ ಸೇರಿ ಒಂದು ವರ್ಷಕ್ಕೆ ರೂ.1,99,51,084/- ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ ಮುಂದುವರೆದು, ಇ-ಆಡಳಿತ ಕೇಂದ್ರ (CeG) ರವರು ಶಾಲಾ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಎರಡನ್ನೂ ಒಳಗೊಂಡಂತೆ 15 ತಿಂಗಳಿಗೆ ರೂ. 2,16,87,232/- (ಜಿ.ಎಸ್.ಟಿ. ಒಳಗೊಂಡಂತೆ) ಗಳ ಪರಿಷ್ಕೃತ ಪ್ರಸ್ತಾವನೆಯನ್ನು ಈ ಕೆಳಗಿನಂತೆ ಸಲ್ಲಿಸಿದೆ.

ಮೇಲೆ ಓದಲಾದ ಕ್ರಮಾಂಕ (6)ರಲ್ಲಿ, ದಿನಾಂಕ: 12.12.2025 ರಂದು ಸುವರ್ಣ ಸೌಧ, ಬೆಳಗಾವಿ ಇಲ್ಲಿ ಪ್ರಧಾನ ಕಾರ್ಯದರ್ಶಿಗಳ, ಸಿ.ಆ.ಸು.ಇ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ, ಎಐ ಆಧಾರಿತ ವಿದ್ಯಾರ್ಥಿಗಳ ಹಾಜರಾತಿ ನಿರ್ವಹಣಾ ವ್ಯವಸ್ಥೆಯ ಅನುಷ್ಠಾನದ ಕುರಿತು ಕರ್ನಾಟಕ ಎಐ ಸೆಲ್, ಸಿಇಜಿ ಮತ್ತು ಖಾಸಗಿ ಮಾರಾಟಗಾರ (ರಿಸಾ) ಸಲ್ಲಿಸಿದ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಸದರಿ ಸಭೆಯಲ್ಲಿ ಉತ್ತಮ ದತ್ತಾಂಶ ಆಡಳಿತದ ಜೊತೆಗೆ ಕರ್ನಾಟಕ ಎಐ ಸೆಲ್, ಸಿಇಜಿ ಇವರ ಪ್ರಸ್ತಾವನೆಯ ಮೂಲಕ ಸರ್ಕಾರವು ಸುಮಾರು 50% ರಷ್ಟು ಉಳಿತಾಯವನ್ನು ಸಾಧಿಸಬಹುದೆಂದು ಗಮನಿಸಲಾಯಿತು.

ಮೇಲೆ ಓದಲಾದ ಕ್ರಮಾಂಕ (7)ರಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ (TAP) ಸಭೆಯು ದಿನಾಂಕ: 06.01.2026 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದು, ಸದರಿ ಸಭೆಯಲ್ಲಿ, ಸಿಇಜಿ ಅವರು, ಸಂಸ್ಥೆಯಲ್ಲಿಯೇ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಎಐ ಆಧಾರಿತ ವಿದ್ಯಾರ್ಥಿಗಳ ಮುಖ ಚಹರೆ ಹಾಜರಾತಿ ಮೇಲ್ವಿಚಾರಣಾ ಮೊಬೈಲ್ ಅಪ್ಲಿಕೇಶನ್ ನ ವಿನ್ಯಾಸ, ಅಭಿವೃದ್ಧಿ ಮತ್ತು ತಾಂತ್ರಿಕ ಅಂಶಗಳನ್ನು ಒಳಗೊಂಡ ವಿವರವಾದ ಪ್ರಸ್ತಾವನೆಯನ್ನು ಮಂಡಿಸಿದರು. ಸದರಿ ಪ್ರಸ್ತಾವನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ (TAP) ಪರಿಶೀಲಿಸಿ ಅನುಮೋದನೆ ನೀಡಿತು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು AI-Based Student Facial Attendance Monitoring System ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ “ನಿರಂತರ” ಕಾರ್ಯಕ್ರಮದ ಪ್ರಾಯೋಗಿಕ ಯೋಜನೆ (Pilot) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ನಿರಂತರ” ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವ ಸಂಬಂಧ ದಿನಾಂಕ: 21.06.2025 ರಂದು ಹೊರಡಿಸಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ.

‘B’ ಈ ಸಂಬಂಧ 2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಆಯವ್ಯಯ ಘೋಷಣೆ – ಕಂಡಿಕೆ 112ರಂತೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು AI-Based Student Facial Attendance Monitoring System ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ “ನಿರಂತರ” ಕಾರ್ಯಕ್ರಮವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಇ-ಆಡಳಿತ ಕೇಂದ್ರದ ಮೂಲಕ ಈ ಕೆಳಕಂಡ ಕೋಷ್ಠಕದ ವಿವರಗಳನ್ವಯ ಅಂದಾಜಿಸಿರುವ ಮೊತ್ತವಾದ ರೂ. 2,16,87,232 (ತೆರಿಗೆ ಸೇರಿ) (ಎರಡು ಕೋಟಿ ಹದಿನಾರು ಲಕ್ಷದ ಎಂಬತ್ತೇಳು ಸಾವಿರದ ಇನ್ನೂರ ಮೂವತ್ತೆರಡು ರೂಪಾಯಿಗಳು ಮಾತ್ರ)ಗಳಲ್ಲಿ ಅಭಿವೃದ್ಧಿಪಡಿಸಿ, 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭದಿಂದಲೇ ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಧಾರವಾಡ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರಿಗೆ ಅನುಮತಿಸಿ ಆದೇಶಿಸಿದೆ.

BIG NEWS: 'Face recognition' mandatory for attendance of all school and college students in the state: Education Department orders
Share. Facebook Twitter LinkedIn WhatsApp Email

Related Posts

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM2 Mins Read
vidhana soudha

ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲಿನಿಂದ 31 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ

12/03/2026 9:32 PM1 Min Read

ರಾಜ್ಯ ಸಚಿವ ಸಂಪುಟ ಸಭೆ: ಮೈಶುಗರ್ ಪುನಶ್ಚೇತನಕ್ಕೆ ₹60 ಕೋಟಿ, ಸೂರ್ಯನಗರದಲ್ಲಿ ಕ್ರೀಡಾಂಗಣಕ್ಕೆ ಅನುಮೋದನೆ

12/03/2026 9:30 PM1 Min Read
Recent News

VIDEO : ‘ಮಧ್ಯಸ್ಥಿಕೆಗಾಗಿ ಮೋದಿಗೆ ಕರೆ ಮಾಡಿ, ಅವ್ರಿಗೆ ಇರಾನ್ ಜೊತೆ ಉತ್ತಮ ಸಂಬಂಧವಿದೆ’ : ‘ಟ್ರಂಪ್’ಗೆ ಅಮೆರಿಕದ ಮಾಜಿ ಕರ್ನಲ್ ಸಲಹೆ

12/03/2026 10:20 PM

ಯುದ್ಧದಿಂದಾಗಿ ಜಗತ್ತು ತೀವ್ರ ಇಂಧನ ಬಿಕ್ಕಟ್ಟು ಎದುರಿಸ್ತಿದೆ, ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡ್ತಿದೆ : ಪ್ರಧಾನಿ ಮೋದಿ

12/03/2026 10:11 PM

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM

BREAKING : ಮತ್ತೆ ಚಿನ್ನ ಗೆದ್ದ ‘ಸುಮಿತ್ ಆಂಟಿಲ್’! ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್’ನಲ್ಲಿ ಭಾರತ ಪ್ರಾಬಲ್ಯ

12/03/2026 9:40 PM
State News
KARNATAKA

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

By kannadanewsnow0912/03/2026 9:44 PM KARNATAKA 2 Mins Read

ಶಿವಮೊಗ್ಗ:  ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಒಳ್ಳೆಯ ಕೆಲಸ ಡಂಗೂರ ಸಾರಿಕೊಂಡು ಹೋಗಲು ಬರುವುದಿಲ್ಲ. ಇಂತಹ ಮಾದರಿ…

vidhana soudha

ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲಿನಿಂದ 31 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ

12/03/2026 9:32 PM

ರಾಜ್ಯ ಸಚಿವ ಸಂಪುಟ ಸಭೆ: ಮೈಶುಗರ್ ಪುನಶ್ಚೇತನಕ್ಕೆ ₹60 ಕೋಟಿ, ಸೂರ್ಯನಗರದಲ್ಲಿ ಕ್ರೀಡಾಂಗಣಕ್ಕೆ ಅನುಮೋದನೆ

12/03/2026 9:30 PM

ಪುರುಷರು ಮಾಡುವ ಈ 5 ಸಣ್ಣ ತಪ್ಪುಗಳೇ `ವಿಚ್ಛೇದನಕ್ಕೆ’ ಕಾರಣವಾಗಬಹುದು!

12/03/2026 9:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.