ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ, ಸ್ನೇಹಮಯಿ ಆಡಿಯೋ ಬಾಂಬ್ ಗೆ ಸ್ಪೋಟಕವಾದ ಟ್ವಿಸ್ಟ್ ಸಿಕ್ಕಿದೆ. ಸ್ನೇಹಮಯಿ ಕೃಷ್ಣ ಸಿಲುಕಿಸಲು ಇಬ್ಬರು ಸೇರಿ ಬಲೆ ಹೆಣದಿದ್ದು, ಇದೀಗ ಆ ಒಂದು ಬಲೆಗೆ ಮುಡಾ ಮಾಜಿ ಆಯುಕ್ತ ನಟೇಶ್ ಹಾಗೂ ವಿನೋದ್ ಬಲೆಗೆ ಬಿದ್ದಿದ್ದಾರೆ.
ಹೌದು ನಟೇಶ್ ಹಾಗೂ ಚಿನ್ನದ ಉದ್ಯಮಿ ವಿನೋದ್ ಸೇರಿ ಸ್ನೇಹಮಯಿ ಕೃಷ್ಣ ಅವರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಲು ಪ್ಲಾನ್ ಮಾಡಿದ್ದರು. ಆದರೆ ಇದೀಗ ಸಿಸಿಬಿಗೆ ವಿನೋದ್ ಮತ್ತು ನಟೇಶ್ ಜೊತೆಗಿರುವ ಫೋಟೋ ಲಭ್ಯವಾಗಿದ್ದು, ಸ್ನೇಹಮಯಿ ಕೃಷ್ಣ ಅವರನ್ನು ಟ್ರ್ಯಾಕ್ ಮಾಡಲು ನಟೇಶ್ ಮತ್ತು ವಿನೋದ್ ಇಬ್ಬರು ಪ್ಲಾನ್ ಮಾಡಿದ್ದರು ಎನ್ನುವುದು ಸಿಸಿಬಿ ತನಿಖೆಯಲ್ಲಿ ಬದಲಾಗಿದೆ.
ನಟೇಶ್ ಮಾತನಾಡಿದ್ದು ಎನ್ನಲದ ಆಡಿಯೋವನ್ನು ವಿನೋದ್ ಕೊಟ್ಟಿದ್ದ. ಈ ಮೂಲಕ ಸ್ನೇಹಮಯಿ ಕೃಷ್ಣ ಅವರ ವಿಶ್ವಾಸ ಗಳಿಸಿದ್ದ. ವಿನೋದ್ ಸಿಎಸ್ ಗೆ ನಟೇಶ್ ಲಂಚ ಕೊಟ್ಟ ಬಗ್ಗೆಯೂ ವಿನೋದ್ ಹೇಳಿದ್ದ. ಕಾರು ಮತ್ತು ಹಣದ ಬ್ಯಾಗಿನ ಕಥೆ ಹೇಳಿ ಕಾರಿನ ಫೋಟೋ ಕೊಟ್ಟಿದ್ದ ವಿನೋದ್ ಮಾತು ನಂಬಿ ಸಿಎಸ್ ವಿರುದ್ಧವೇ ಸ್ನೇಹಮಯಿ ಕೃಷ್ಣ ದೂರು ನೀಡಿ ಗಂಭೀರವಾದ ಆರೋಪ ಮಾಡಿದ್ದಾರೆ. ಈ ಮೂಲಕ ಸ್ನೇಹಮಯಿಗೆ ಕಾನೂನು ಕುಣಿಕೆ ತೊಡಿಸಲು ಪ್ಲಾನ್ ಮಾಡಿದ್ದರು ಎನ್ನುವುದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.








