ಮೈಸೂರು : ಮೈಸೂರು ಅರಮನೆ ಎದುರು ಹೀಲಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ತನಿಖೆಯ ವೇಳೆ ಮೃತ ಸಲೀಂ ಸೈಕಲ್ ನಲ್ಲಿ ಇದ್ದಂತಹ ಅರ್ಧ ಕೆಜಿ ಹಿಲಿಯಂ ಪೌಡರ್ ನನ್ನು ವಶ ಪಡಿಸಿಕೊಂಡಿದ್ದಾರೆ.
ಹೌದು ಮೈಸೂರು ಅರಮನೆ ಬಳಿ ಹೀಲಿಯಮ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಸಲೀಂ ಸೈಕಲ್ನಲ್ಲಿ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ ಸ್ಪೋಟದ ಸ್ಥಳದಲ್ಲಿ ಇದೀಗ ಅರ್ಧ ಕೆಜಿ ಹಿಲಿಯಂ ಪೌಡರ್ ತುಂಬಿದ ಚೀಲ ಪತ್ತೆಯಾಗಿದೆ. ಪೊಲೀಸ್ ಪರಿಶೀಲನೆಯ ವೇಳೆ ಪೊಲೀಸರು ಹಿಲಿಯಂ ಪೌಡರನ್ನು ಅಶಕ್ಕೆ ಪಡೆದುಕೊಂಡಿದ್ದಾರೆ.
ಹಿಲಿಯಂ ಗ್ಯಾಸ್ ರೆಫೀಲ್ ಮಾಡಲು ಅರ್ಧ ಗಂಟೆ ಬೇಕು ಜನನಿ ನಿಬಿಡ ಪ್ರದೇಶದಲ್ಲಿ ಹೀಲಿಯಂ ತಯಾರಿಸಲು ಸಾಧ್ಯವಿಲ್ಲ ಹೀಗಿದ್ದರೂ ಕೂಡ ಸಲೀಂ ಜೊತೆಯಲ್ಲಿಯೇ ಹಿಲಿಯಂ ಪೌಡರ್ ಇಟ್ಟುಕೊಂಡಿದ್ದು ಯಾಕೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಅನುಮಾನಕ್ಕೆ ಇದೀಗ ಹಿಲಿಯಂ ಪೌಡರ್ ಕಾರಣವಾಗಿದ್ದು ಅದನ್ನು ಸಂಗ್ರಹಿಸಲಾಗಿದೆ.








