ಬೆಂಗಳೂರು : ಎಲ್ಲರು ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಅಷ್ಟೇ ಎಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಿಮ್ಮ ಮಕ್ಕಳನ್ನು ಅವಿದ್ಯಾವಂತರಾಗಲು ಬಿಡಬೇಡಿ ವಿದ್ಯೆ ಇದ್ದರೆ ಮಾತ್ರ ಸ್ವಾಭಿಮಾನ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಗುಲಾಮಗಿರಿ ಮನೆ ಮಾಡಿಕೊಳ್ಳುತ್ತದೆ ಎಂದು ವೀರೇಂದ್ರ ಕೇಶವ ತಾರಕಾನಂದ ಪರಿಶ್ರೀ ಪುಣ್ಯಾರಾಧನೆ ಸ್ಮರಣಾರ್ಥ ಭಕ್ತರ ಭಂಡಾರದ ಕುಟಿಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೇಲ್ಜಾತಿಯ ಬಡವ ಬಂದರೆ ಗೌರವ ಕೊಡುತ್ತೇವೆ. ಕೆಲವರ್ಗದ ಶ್ರೀಮಂತ ಬಂದರೆ ಅವರನ್ನು ಕೀಳಾಗಿ ಕಾಣುತ್ತೇವೆ. ಸ್ವಾಭಿಮಾನಿಗಳಾಗಿ ಬದುಕುವುದು ದುರಹಂಕಾರ ಅಲ್ಲ. ನನ್ನ ನೋಡಿದರೆ ದುರಹಂಕಾರಿ ಅಂತಾರೆ ನಾನು ಸ್ವಾಭಿಮಾನಿ ದುರಹಂಕಾರಿ ಅಂತ ಯಾರೇ ಕರೆದರೂ ನಾನು ಅದಕ್ಕೆ ಸೊಪ್ಪು ಹಾಕಲ್ಲ ವಿರೋಧ ಮಾಡುವವರು ಸತ್ಯಕ್ಕೆ ಹತ್ತಿರವಾಗಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಮೇಲ್ವರ್ಗದ ಬಡವ ಬಂದರೆ ಏನು ಸ್ವಾಮಿ ಎನ್ನುತ್ತಾರೆ. ದಲಿತನೊಬ್ಬ ವಿದ್ಯಾವಂತ ಶ್ರೀಮಂತ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ಹೇಳಿದರು.
ಮಠಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಠಗಳು ಆಗದಿದ್ದರೆ ಶಿಕ್ಷಣ, ಆರೋಗ್ಯ ಸಂಘಟನೆ ಆಗುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿಯನ್ನ ಗುರುತಿಸಬೇಕು, ಜಾತಿಯನ್ನ ನಾಶ ಮಾಡಬೇಕು ಎಂದು ಕುವೆಂಪು ಹೇಳಿದರು. ಎಲ್ಲರ ಸರ್ವೋದಯ ಆಗಬೇಕು ಎಂದು ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಕುವೆಂಪು ಅವರು ಸಮಪಾಲು, ಸಮಬಾಳು ಆಗ್ಬೇಕು ಎಂದರು. ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆ ಆಗಬೇಕು ಎಂದು ತಿಳಿಸಿದರು.