Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶದ ಖಾಸಗಿ ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ₹25,000 ಸಂಬಳ ಇರುವವರಿಗೂ `EPF’ ಕಡ್ಡಾಯ!

05/05/2026 5:15 PM

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

05/05/2026 4:54 PM

ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay

05/05/2026 4:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಪರಿಸರ ಜಾಗೃತಿ ಕ್ಲಬ್’ ಕಡ್ಡಾಯ : DCM ಡಿ.ಕೆ.ಶಿವಕುಮಾರ್
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಪರಿಸರ ಜಾಗೃತಿ ಕ್ಲಬ್’ ಕಡ್ಡಾಯ : DCM ಡಿ.ಕೆ.ಶಿವಕುಮಾರ್

By kannadanewsnow5718/06/2025 6:36 AM

ಬೆಂಗಳೂರು : ಮಕ್ಕಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಪರಿಸರ, ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ರಚಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾ‌ರ್ ತಿಳಿಸಿದ್ದಾರೆ.

ವಿಶ್ವ ಪರಿಸರ ದಿನದ ನಿಮಿತ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಂಗಳವಾರ ಆಯೋಜಿಸಿದ್ದ ಮ್ಯಾರ ಥಾನ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಶಾಲಾ ಸಮಯ ದಲ್ಲಿಯೇ ಪರಿಸರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸಬೇಕು. ಅದಕ್ಕಾಗಿ ಪ್ರತಿ ಶಾಲೆಯಲ್ಲೂ ಕನಿಷ್ಠ 25 ವಿದ್ಯಾರ್ಥಿಗಳ ರ್ಥಿಗಳ ನ್ನೊಳಗೊಂಡ ಜಾಗೃತಿ ಕ್ಲಬ್ ರಚಿಸಬೇಕು ಎಂದು ಆದೇಶಿಸಲಾ ಗಿದೆ. ಜತೆಗೆ ಒಂದೊಂದು ಶಾಲೆಯೂ ಮರ ಬೆಳೆಸಲು ಆಯಾ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದು ಹೇಳಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ನಿವೃತ್ತರ ಸ್ವರ್ಗ, ಉದ್ಯಾನ ನಗರಿ ಎಂದು ಖ್ಯಾತವಾಗಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಶ್ವಾಸ ತಾಣ ಉಳಿಸಲು ಹೆಸರುಘಟ್ಟ ಹುಲ್ಲುಗಾವಲಿನ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದರು.

ಬೆಂಗಳೂರು ಉತ್ತರದ ಯಲಹಂಕ ಬಳಿ 153 ಎಕರೆ ಭೂಮಿಯಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇನ್ನು 2 ತಿಂಗಳೊಳಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.

ಮರುಬಳಕೆ, ಪುನರ್ ಬಳಕೆ ಇಂದಿನ ಅಗತ್ಯ:

ಹಿಂದೆ ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಕೆ ಮಾಡುತ್ತಿದ್ದರು. ಪುನರ್ ಬಳಕೆ ಮಾಡುತ್ತಿದ್ದರು, ಸುಸ್ಥಿರ ಅಭಿವೃದ್ಧಿಗೆ ಪುನರ್ ಬಳಕೆ, ಮರು ಬಳಕೆ ಅನಿವಾರ್ಯ ಎಂದು ತಿಳಿಸಿದರು.

ಮಹಾತ್ಮಾ ಗಾಂಧೀಜಿ ಅವರು “ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’’ ಎಂದು ಹೇಳಿದ್ದಾರೆ, ನಾವೆಲ್ಲರೂ ಮಹಾತ್ಮಾ ಗಾಂಧೀ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.

ವಿಶ್ವ ಪರಿಸರ ದಿನಕ್ಕೆ ಎರಡು ಮಹತ್ವದ ಆದೇಶ:

ವಿದ್ಯಾವಂತ ಜನರೇ ತಾವು ಖರೀದಿಸುವ ಖನಿಜಯುಕ್ತ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ರಸ್ತೆಯಲ್ಲಿ ಎಸೆಯುತ್ತಾರೆ. ಇದನ್ನು ತಡೆಯಲು ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದ ಸಮಿತಿ ರಚಿಸಲು ಆದೇಶ ಮಾಡಲಾಗಿದೆ, ತಯಾರಕರ ವಿಸ್ತರಿತ ಜವಾಬ್ದಾರಿಯಂತೆ ಖಾಲಿ ನೀರಿನ ಬಾಟಲಿ ಮರು ಖರೀದಿಸುವುದನ್ನು ಕಡ್ಡಾಯ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಅದೇ ರೀತಿ ರಸ್ತೆಯ ಬದಿಯಲ್ಲಿ ಸರ್ಕಾರ ನೆಡುವ ಗಿಡ, ಮರದ ಸುತ್ತ, ಎನ್.ಜಿ.ಟಿ. ಆದೇಶದಂತೆ ಒಂದು ಮೀಟರ್ ಸುತ್ತಳತೆ ಮಣ್ಣಿರಬೇಕು, ಹೀಗಾಗಿ ಅಲ್ಲಿ ಹಾಕಿರುವ ಕಾಂಕ್ರೀಟ್ ತೆಗೆಯುವಂತೆ ಆದೇಶ ಮಾಡಲಾಗಿದ್ದು, ಇದನ್ನು ಇಂದು ಮಾನ್ಯ ಮುಖ್ಯಮಂತ್ರಿಗಳೇ ವಿಶ್ವ ಪರಿಸರ ದಿನದ ಕೊಡುಗೆಯಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದರು.

ವೃಕ್ಷೋ ರಕ್ಷತಿ ರಕ್ಷಿತಃ

ಯಾರು ಮರಗಳನ್ನು ಉಳಿಸುತ್ತಾರೋ ಅವರನ್ನು ಪರಿಸರ ಮತ್ತು ಪ್ರಕೃತಿಯೂ ಸಂರಕ್ಷಿಸುತ್ತದೆ. ಇದನ್ನು ಅರಿತು ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸಿಕೊಂಡು ನಿರ್ಮಲ ಪರಿಸರಕ್ಕಾಗಿ ಶ್ರಮಿಸಬೇಕು. ಮನೆಯ ಮುಂದೆ ಗಿಡ ನೆಟ್ಟು ಪೋಷಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ 2 ವರ್ಷಗಳ ಸಾಧನೆ ಸಾರುವ ತುಂಬಿತು 2 ವರುಷ, ಹಸಿರು ಸಂರಕ್ಷಣೆಯ ಹರುಷ ಎಂಬ ಕಿರುಹೊತ್ತಗೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ದಿನೇಶ್ ಗುಂಡೂರಾವ್, ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಪಿಸಿಬಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಶಾಸಕರುಗಳಾದ ಪೊನ್ನಣ್ಣ, ಅಶೋಕ್ ಪಟ್ಟಣ್ ಮತ್ತಿತರರು ಪಾಲ್ಗೊಂಡಿದ್ದರು

BIG NEWS: `Environmental Awareness Club' is mandatory in all schools in the state: DCM D.K. Shivakumar
Share. Facebook Twitter LinkedIn WhatsApp Email

Related Posts

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

05/05/2026 4:54 PM2 Mins Read

ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay

05/05/2026 4:48 PM2 Mins Read

ರಾಜ್ಯ ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ನೌಕರರ ವರ್ಗಾವಣೆ 2026: ಮಾರ್ಗಸೂಚಿ, ವೇಳಾಪಟ್ಟಿ ಪ್ರಕಟ

05/05/2026 4:27 PM2 Mins Read
Recent News

ದೇಶದ ಖಾಸಗಿ ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ₹25,000 ಸಂಬಳ ಇರುವವರಿಗೂ `EPF’ ಕಡ್ಡಾಯ!

05/05/2026 5:15 PM

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

05/05/2026 4:54 PM

ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay

05/05/2026 4:48 PM

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ: ವಿಜಯ್ ಅವರ TVK ಭರ್ಜರಿ ಗೆಲುವು, ಅರವಿಂದ್ ಕೇಜ್ರಿವಾಲ್ ಜೊತೆ ಹೋಲಿಕೆ!

05/05/2026 4:30 PM
State News
KARNATAKA

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

By kannadanewsnow0905/05/2026 4:54 PM KARNATAKA 2 Mins Read

ಬೆಂಗಳೂರು : ಕರ್ನಾಟಕದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಹಾಗೂ ಸ್ಟಾರ್ಟ್‌ಅಪ್‌ಗಳ ಸಂಶೋಧನೆಗಳಿಗೆ ಜಾಗತಿಕ ಮಾನ್ಯತೆ ಒದಗಿಸುವ…

ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay

05/05/2026 4:48 PM

ರಾಜ್ಯ ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ನೌಕರರ ವರ್ಗಾವಣೆ 2026: ಮಾರ್ಗಸೂಚಿ, ವೇಳಾಪಟ್ಟಿ ಪ್ರಕಟ

05/05/2026 4:27 PM

ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ : ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಕಿಡ್ನಾಪ್, ತಡೆಯಲು ಬಂದವನ ಭೀಕರ ಹತ್ಯೆ!

05/05/2026 4:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.