ವಿಜಯಪುರ : ಕನ್ನೆರಿ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೀಶ ನಿರ್ಬಂಧ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ನಿರ್ಬಂಧ ಹಿನ್ನೆಲೆಯಲ್ಲಿ ಕನ್ನೆರಿ ಶ್ರೀಗಳು ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಸಜ್ಜಾಗಿದ್ದಾರೆ ಬಸವೇಶ್ವರ ಹಿಂದೂ ಸಮಾವೇಶದ ಮೂಲಕ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದ್ದು ರಮಾನಂದ ಮಠದ ಶಂಕರಾನಂದ ಶ್ರೀಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.
ಬಾಗಲಕೋಟೆ ಜಿಲ್ಲೆಯ ಶಿರೂರಿನ ರಮಾನಂದ ಮಠದ ಶಂಕರಾನಂದಾಶ್ರೀ ಬೈಕ್ ರ್ಯಾಲಿ, ಕುಂಭಮೇಳ ಮತ್ತು ಬೃಹತ್ ಮೆರವಣಿಗೆ ಮೂಲಕ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಬಬಲೇಶ್ವರ ಹೊರವಲಯದಲ್ಲಿ ಸಮಾವೇಶ ನಡೆಯಲಿದೆ. ವಿವಿಧ ಮಠಾಧೀಶರು ಹಾಗೂ 25,000ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಅಕ್ಟೋಬರ್ 16ರಿಂದ ಡಿಸೆಂಬರ್ 14ರ ವರೆಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಕನ್ನೆರಿ ಮಠದ ಶ್ರೀಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಲಿಂಗಾಯತ ಸ್ವಾಮೀಜಿಗಳಿಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ನಿರ್ಬಂಧ ವಿಧಿಸಿತ್ತು. ಇದರ ಹಿಂದೆ ಸಚಿವ ಎಂಬಿ ಪಾಟೀಲ್ ಇದ್ದಾರೆ ಎಂದು ಕನ್ನೇರಿ ಮಠದ ಶ್ರೀಗಳು ಗಂಭೀರವಾಗಿ ಆರೋಪಿಸಿದ್ದರು. ಇಂದು ಹಿಂದೂ ಸಮಾವೇಶದ ಮೂಲಕ ಜಿಲ್ಲೆಗೆ ಆಗಮಿಸಲಿದ್ದಾರೆ. ಮುನ್ನೆಚ್ಚರಿಕೆಯಿಂದ ಇಂದಿನ ಕಾರ್ಯಕ್ರಮಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹಲವು ಶರತ್ತುಗಳನ್ನು ವಿಧಿಸಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಅನುಮತಿ ನೀಡಿದ್ದಾರೆ.








