ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಗೀಗ ಮತ್ತೊಂದು ಬಿಗ್ ಟ್ರಸ್ಟ್ ಸಿಕ್ಕಿದ್ದು 500 ಕೋಟಿ ಹವಾಲ ಅವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತನಿಖೆಯಲ್ಲಿ ಇದೀಗ ಸ್ಪೋಟಕ ಅಂಶ ಬಯಲಾಗಿದೆ.
ಹೌದು 500 ಕೋಟಿ ಹವಾಲಾ ಹಣದ ಅವ್ಯವಹಾರವೇ ಇದೀಗ ಸಿಜೆ ರಾಯ್ ಗೆ ಮುಳುವಾಗಿದೆ. 500 ಕೋಟಿ ಬಗ್ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ ಕಂಗಾಲಾಗಿದ್ದರು. ಲೆಕ್ಕ ನೀಡಲಾಗದೆ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿದ್ದರು. ಹೋಟೆಲ್ ಬದಲು ಕಚೇರಿಯಲ್ಲಿಯೇ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 500 ಕೋಟಿ ಹಣದ ವ್ಯವಹಾರ ಇಕ್ಕಟ್ಟಿಗೆ ರಾಯಿ ಸಿಲುಕಿದ್ದರು.
ಆತ್ಮಹತ್ಯೆಯ ದಿನ ಐಟಿಗೆ ಉತ್ತರಿಸುವುದಾಗಿ ರಾಯ್ ಹೇಳಿದ್ದರು. ಆದರೆ ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡ ಸೇವಿಸದೆ ಮತ್ತಷ್ಟು ಟೆನ್ಶನ್ ಹೆಚ್ಚಾಗಿದೆ. ಇನ್ನು 500 ಕೋಟಿ ರಹಸ್ಯ ನಾಲ್ವರಿಗೆ ಮಾತ್ರ ಗೊತ್ತಿತ್ತು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಸಿಜೆ ರಾಯ್ ಕೇರಳ ಮೂಲದ ಬಿಜಿನೆಸ್ ಪಾರ್ಟ್ನರ್ ಐಟಿ ಅಧಿಕಾರಿಗಳು ಹಾಗೂ ಸಿಜೆ ರಾಯ್ ಅವರ ಸಿಎ ಗೆ ಮಾತ್ರ ಗೊತ್ತಿತ್ತು ಎಂದು ತಿಳಿದುಬಂದಿದೆ.
ಈ ಪ್ರಕರಣದ ಪ್ರಮುಖ ಅಂಶಗಳು ಇಲ್ಲಿವೆ:
1. ಹವಾಲಾ ದಂಧೆಯ ನಂಟು
ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 500 ಕೋಟಿ ರೂಪಾಯಿ ಮೊತ್ತದ ಅಕ್ರಮ ಹಣ ವರ್ಗಾವಣೆ ಅಥವಾ ಹವಾಲಾ ವ್ಯವಹಾರದಲ್ಲಿ ರಾಯ್ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಈ ಹಣದ ವ್ಯವಹಾರದಲ್ಲಿ ಉಂಟಾದ ಭಾರಿ ನಷ್ಟ ಅಥವಾ ಹಣ ನೀಡಿದವರಿಂದ ಬಂದ ಒತ್ತಡವೇ ಅವರನ್ನು ಈ ತೀವ್ರ ನಿರ್ಧಾರಕ್ಕೆ ತಳ್ಳಿರಬಹುದು ಎಂದು ಶಂಕಿಸಲಾಗಿದೆ.
2. ತನಿಖೆಯ ದಿಕ್ಕು
ಪೊಲೀಸರು ಕೇವಲ ವೈಯಕ್ತಿಕ ಕಾರಣಗಳನ್ನಷ್ಟೇ ಅಲ್ಲದೆ, ಅವರ ವ್ಯವಹಾರಿಕ ಪಾಲುದಾರರು ಮತ್ತು ಇತ್ತೀಚಿನ ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
-
ಡೈರಿ ಮತ್ತು ದಾಖಲೆಗಳು: ರಾಯ್ ಅವರ ಕಚೇರಿ ಮತ್ತು ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
-
ಬ್ಯಾಂಕ್ ವಹಿವಾಟು: ಅವರ ಬ್ಯಾಂಕ್ ಖಾತೆಗಳ ಮೂಲಕ ನಡೆದ ವಿದೇಶಿ ಮತ್ತು ದೇಶೀಯ ಹಣದ ವರ್ಗಾವಣೆಯ ಮೇಲೆ ಕಣ್ಣಿಡಲಾಗಿದೆ.
3. ಒತ್ತಡ ಮತ್ತು ಬೆದರಿಕೆ
ಹವಾಲಾ ದಂಧೆಯಲ್ಲಿ ದೊಡ್ಡ ಮಟ್ಟದ ಪ್ರಭಾವಿಗಳು ಭಾಗಿಯಾಗಿರುವ ಸಾಧ್ಯತೆಯಿದ್ದು, ಅವರಿಂದ ರಾಯ್ ಅವರಿಗೆ ಪ್ರಾಣ ಬೆದರಿಕೆ ಅಥವಾ ಮಾನಸಿಕ ಕಿರುಕುಳ ಇತ್ತೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.








