ಚಾಮರಾಜನಗರ : ಚಾಮರಾಜನಗರದಲ್ಲಿ ಕಾಡಾನೆ ದಾಳಿ ಮುಂದುವರೆದಿದೆ ಇದಿಗ ಕಾಡಾನೆ ದಾಳಿಗೆ ಬೈಕ್ ಸವಾರನೊಬ್ಬ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಜಲ್ಲಿಪಾಳ್ಯ ಸಮೀಪ ಘಟನೆ ಸಭವಿಸಿದೆ. ಬೈಕ್ ಸವಾರ ಶಿವಮೂರ್ತಿ (50) ಎನ್ನುವವರು ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯದಿಂದ ಮೂಕನಪಾಳ್ಯಕ್ಕೆ ಬೈಕ್ ನಲ್ಲಿ ತೆರಳುವಾಗ ಆನೆ ದಾಳಿ ಮಾಡಿದೆ. ಕೂಲಿ ಕೆಲಸ ಮುಗಿಸಿ ವಾಪಸ್ ಆಗುವ ವೇಳೆ ಒಂಟಿ ಸಲಗ ದಾಳಿ ಮಾಡಿದೆ. ಬಾಳೆ ಕಟಾವು ಬಳಿಕ ಬೈಕ್ ನಲ್ಲಿ ಹಿಂದಿರುಗುವಾಗ ಕಾಡಾನೆ ದಾಳಿ ಮಾಡಿದೆ. ಹಾಗಾಗಿ ಸ್ಥಳದಲ್ಲೇ ಶಿವಮೂರ್ತಿ ಮೃತಾಪಟ್ಟಿದ್ದಾರೆ. ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








