ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಹೆಚ್ಚಳ ಮಾಡಲು ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳು ಮುಂದಾಗಿವೆ ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿ ಯೂನಿಟ್ ಗೆ 60 ಪೈಸೆಯಿಂದ 1 ರೂ.ವರೆಗೆ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದು, 2025 -26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ, 2026 -27ರಲ್ಲಿ ಯೂನಿಟ್ ಗೆ 75 ಪೈಸೆ, 2027- 28ರಲ್ಲಿ ಯೂನಿಟ್ ಗೆ 91 ಪೈಸೆಯಷ್ಟು ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಾಯ ಕೊರತೆ ಸರಿದೂಗಿಸಲು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದರ ಏರಿಕೆಯ ಬಗ್ಗೆ ಕೆಇಆರ್‌ಸಿ ವತಿಯಿಂದ ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವರ್ಗದವರಿಂದ ಅಹವಾಲು ಸ್ವೀಕರಿಸಿ ನಂತರ ದರ ಹೆಚ್ಚಳದ ಬಗ್ಗೆ ಅಂತಿಮ ಆದೇಶ ಹೊರಡಿಸಲಿದೆ. 2025ರ ಫೆಬ್ರವರಿ, ಮಾರ್ಚ್ ನಲ್ಲಿ ಆದೇಶ ಹೊರಡಿಸಿ ಏಪ್ರಿಲ್ 1ರಿಂದ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.