Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿಗಳಿಗೆ ‘ಫ್ರೆಂಚ್’ ಆಫರ್: 30,000 ಭಾರತೀಯರಿಗೆ ಉನ್ನತ ವ್ಯಾಸಂಗದ ಅವಕಾಶ, ವೀಸಾ ಮುಕ್ತ ಟ್ರಾನ್ಸಿಟ್ ಸೌಲಭ್ಯ!

18/02/2026 8:58 AM

BIG NEWS : ಪತಿಯಿಂದ ಜೀವನಾಂಶ ಪಡೆಯುವುದು ದಾನವಲ್ಲ, ಪತ್ನಿಯ ಹಕ್ಕು : ಹೈಕೋರ್ಟ್ ಮಹತ್ವದ ತೀರ್ಪು

18/02/2026 8:54 AM

BREAKING: ಚುನಾವಣೆಗೂ ಮುನ್ನ ಕಮಲ್ ಹಾಸನ್ MNM ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ

18/02/2026 8:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು `ಅನಧಿಕೃತ ಶಾಲೆಗಳ’ ಮಾಹಿತಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶ.!
KARNATAKA

BIG NEWS : ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು `ಅನಧಿಕೃತ ಶಾಲೆಗಳ’ ಮಾಹಿತಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶ.!

By kannadanewsnow5728/11/2025 5:45 AM

ಬೆಂಗಳೂರು : ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ಮಾಹಿತಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದ ಕಾಯ್ದೆಗಳನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಮಾನ್ಯತೆ ಪಡೆದು ಶಾಲೆಗಳನ್ನು ನಡೆಸಬೇಕಾಗಿರುತ್ತದೆ. ಅದರಂತೆ ಇಲಾಖೆಯು ಪ್ರತಿ ವರ್ಷವು ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಿ, ನಿಯಮಾನುಸಾರ ಪರಿಶೀಲಿಸಿ ಮಾನದಂಡಗಳನ್ನು ಪೂರೈಸಿದ ಅರ್ಹ ಶಾಲೆಗಳಿಗೆ ಅನುಮತಿಯನ್ನು ನೀಡಲಾಗುತ್ತಿದ್ದು, ಅದರಂತೆ 2025-26ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿಗಧಿಪಡಿಸಿದ ಅಂತಿಮ ದಿನಾಂಕದೊಳಗೆ ಅನುಮತಿ ನೀಡಲಾಗಿರುತ್ತದೆ.

ಸೂಚಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದಲ್ಲಿ ಅಂತಹ ಶಾಲೆಗಳ ಪಟ್ಟಿಯನ್ನು ಮತ್ತು ಕೇಂದ್ರ ಪರೀಕ್ಷಾ ಮಂಡಳಿಗೆ ಸಂಯೋಜನೆ ಹೊಂದದೇ ಅನಧಿಕೃತವಾಗಿ ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಪಟ್ಟಿಯನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ರವರಿಗೆ ಸಲ್ಲಿಸತಕ್ಕದ್ದು, ಉಪನಿರ್ದೇಶಕರು(ಆಡಳಿತ) ರವರು ಅನಧಿಕೃತ ಶಾಲೆಯೆಂದು ಗುರುತಿಸಿರುವ ಬಗ್ಗೆ ಸ್ಪಷ್ಟಿಕರಿಸಿಕೊಂಡು ಕೆಳಕಂಡ ನಮೂನೆಯಲ್ಲಿ ಅನಧಿಕೃತ ಶಾಲೆಗಳ ಮಾಹಿತಿಯನ್ನು ಕ್ರೋಢೀಕರಿಸಿ, ದೃಢೀಕರಿಸಿ ದಿನಾಂಕ: 28-11-2025 ರೊಳಗಾಗಿ ಇ-ಮೇಲ್ ವಿಳಾಸ giaprimarycpi@gmail.com ಗೆ ಸಲ್ಲಿಸಲು ಸೂಚಿಸಿದೆ.

ಅನಧಿಕೃತ ಶಾಲೆ ಎಂದು ಗುರುತಿಸುವ ವಿಧ:

1. ಶಾಲಾ ನೋಂದಣಿ/ ಅನುಮತಿ ಪಡೆಯದೇ ನಡೆಯುತ್ತಿರುವ ಶಾಲೆಗಳು:- ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30 ಮತ್ತು 31ರಂತೆ ನೋಂದಣಿ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.

2. ನೋಂದಣಿ ಇಲ್ಲದೇ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು:- ಕರ್ನಾಟಕ ಶಿಕ್ಷಣ ಕಾಯಿದೆ-1983 ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಸೆಕ್ಷನ್-32 ರಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿದ್ದಲ್ಲಿ ಉನ್ನತೀಕರಿಸಿಲ್ಲದ ತರಗತಿಗಳಿಗೆ ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.

3. ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳು:- ರಾಜ್ಯ ಪಠ್ಯಕ್ರಮದಲ್ಲಿ ಅನುಮತಿಯನ್ನು ಪಡೆದು ಕೇಂದ್ರ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಅಫಿಲಿಯೇಷನ್ ಪಡೆಯದೆ ಕೇಂದ್ರ ಪಠ್ಯಕ್ರಮದ ಶಾಲೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.

4. ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು:-ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ/ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದಿರುವಂತಹ ಮಾಧ್ಯಮವನ್ನು ಹೊರತುಪಡಿಸಿ ಬೇರೆ ಬೇರೆ ಮಾಧ್ಯಮದಲ್ಲಿ ನಡೆಸುತ್ತಿರುವಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.

5. ಹಿಂದಿನ ಸಾಲುಗಳ ಮಾನ್ಯತೆ ನವೀಕರಣವನ್ನು ಪಡೆಯದಿರುವುದು:- ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳು ಆಯಾ ವರ್ಷವೇ ಅಗತ್ಯ ದಾಖಲೆಗಳನ್ನು ಇಲಾಖಾ ಮಾರ್ಗದರ್ಶನದಂತೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ, ನಿಗದಿತ ಸಮಯದೊಳಗೆ ಮಾನ್ಯತೆ ನವೀಕರಣವನ್ನು ಪಡೆಯುವುದು ಆದ್ಯ ಕರ್ತವ್ಯವಾಗಿರುತ್ತದೆ.

BIG NEWS: Education Department orders all field education officers in the state to submit information on 'unauthorized schools'!
Share. Facebook Twitter LinkedIn WhatsApp Email

Related Posts

BIG NEWS: ಅತ್ಯಾಚಾರ, ಪೋಕ್ಸೋ ಕೇಸಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಖಡಕ್ ಆದೇಶ

18/02/2026 8:28 AM3 Mins Read

ಸಾಲ ಪಡೆಯಲು `CIBIL’ ಸ್ಕೋರ್ ಏಕೆ ಮುಖ್ಯ? ಇದನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

18/02/2026 8:25 AM2 Mins Read

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

18/02/2026 8:22 AM3 Mins Read
Recent News

ವಿದ್ಯಾರ್ಥಿಗಳಿಗೆ ‘ಫ್ರೆಂಚ್’ ಆಫರ್: 30,000 ಭಾರತೀಯರಿಗೆ ಉನ್ನತ ವ್ಯಾಸಂಗದ ಅವಕಾಶ, ವೀಸಾ ಮುಕ್ತ ಟ್ರಾನ್ಸಿಟ್ ಸೌಲಭ್ಯ!

18/02/2026 8:58 AM

BIG NEWS : ಪತಿಯಿಂದ ಜೀವನಾಂಶ ಪಡೆಯುವುದು ದಾನವಲ್ಲ, ಪತ್ನಿಯ ಹಕ್ಕು : ಹೈಕೋರ್ಟ್ ಮಹತ್ವದ ತೀರ್ಪು

18/02/2026 8:54 AM

BREAKING: ಚುನಾವಣೆಗೂ ಮುನ್ನ ಕಮಲ್ ಹಾಸನ್ MNM ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ

18/02/2026 8:46 AM

BIG NEWS : ತಂದೆಯ 2ನೇ ಪತ್ನಿಯ ಮಗನಿಗೂ `ಅನುಕಂಪದ ಉದ್ಯೋಗದ ಹಕ್ಕಿದೆ’ : ಹೈಕೋರ್ಟ್ ಐತಿಹಾಸಿಕ ತೀರ್ಪು !

18/02/2026 8:42 AM
State News
KARNATAKA

BIG NEWS: ಅತ್ಯಾಚಾರ, ಪೋಕ್ಸೋ ಕೇಸಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಖಡಕ್ ಆದೇಶ

By kannadanewsnow0918/02/2026 8:28 AM KARNATAKA 3 Mins Read

ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ,…

ಸಾಲ ಪಡೆಯಲು `CIBIL’ ಸ್ಕೋರ್ ಏಕೆ ಮುಖ್ಯ? ಇದನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

18/02/2026 8:25 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

18/02/2026 8:22 AM

BREAKING: ರಾಜ್ಯದ ಎಲ್ಲಾ ‘ರಕ್ತ ಕೇಂದ್ರ’ಗಳು NABH ಅಥವಾ NQAS ಮಾನ್ಯತೆ ಪಡೆಯುವುದು ಕಡ್ಡಾಯ: ಆರೋಗ್ಯ ಇಲಾಖೆ ಆದೇಶ

18/02/2026 8:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.