Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು, ಪ್ರೇಯಸಿಯ ಪತಿಯನ್ನೆ ಕೊಂದ ಪ್ರಿಯಕರ!

07/04/2026 10:32 AM

ವಲಸೆ ಕಾರ್ಮಿಕರಿಗೆ ಬಿಗ್ ರಿಲೀಫ್ : ರಾಜ್ಯಗಳಿಗೆ 5 ಕೆಜಿ ಸಿಲಿಂಡರ್ ಹಂಚಿಕೆಯನ್ನು ದ್ವಿಗುಣಗೊಳಿಸಿದ ಕೇಂದ್ರ ಸರ್ಕಾರ

07/04/2026 10:30 AM

ನಿಮ್ಮ `ಮೊಬೈಲ್’ ಪದೇ ಪದೇ ಹ್ಯಾಂಗ್ ಆಗುತ್ತಿದೆಯೇ? ಈ 5 ಕೆಲಸಗಳನ್ನು ಮಾಡಿದರೆ ಹೆಚ್ಚಲಿದೆ ವೇಗ.!

07/04/2026 10:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲೆಯ ಅಡುಗೆ ಸಿಬ್ಬಂದಿಗಳನ್ನು ಸೇವೆಯಿಂದ ಬಿಡುಗಡೆ ಮಾಡುವ ಕುರಿತು, ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಶಾಲೆಯ ಅಡುಗೆ ಸಿಬ್ಬಂದಿಗಳನ್ನು ಸೇವೆಯಿಂದ ಬಿಡುಗಡೆ ಮಾಡುವ ಕುರಿತು, ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow0528/03/2025 5:31 AM

ಬೆಂಗಳೂರು : ರಾಜ್ಯದ ಶಾಲೆಯ ಅಡುಗೆ ಸಿಬ್ಬಂದಿ ಗಳನ್ನು ಸೇವೆಯಿಂದ ಬಿಡುಗಡೆ ಮಾಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ಸಿಬ್ಬಂದಿಯನ್ನು ವಾರ್ಷಿಕ ಹತ್ತು ತಿಂಗಳ ತಾತ್ಕಾಲಿಕ ಸೇವೆಯನ್ನು ಪೊರೈಸಿದ ನಂತರ 31ನೇ-ಮಾರ್ಚ ಅಂತ್ಯಕ್ಕೆ ಸೇವೆಯಿಂದ ಕೈಬಿಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25 ನೇ ಸಾಲಿನ ಪಿಎಂಪೋಷಣ್-ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಜೂನ್-2024 ಮಾಹೆಯಿಂದ ಮಾರ್ಚ್-2025 ರ ಮಾಹೆಯವರೆಗೆ ಒಟ್ಟು 10 ತಿಂಗಳ ಅವಧಿಗೆ ಯೋಜನೆಯನ್ನು ನಡೆಸಲು ಅನುಮೋದನೆ ನೀಡಿರುತ್ತದೆ. ಸದರಿ ಅವಧಿಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಅಡುಗೆ ತಯಾರಿಸಿ ವಿತರಿಸುವ ಕೆಲಸಕ್ಕೆ ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆದುಕೊಂಡಿದ್ದು, ಈ ಅವಧಿಗೆ ಮಾಸಿಕ ಗೌರವ ಸಂಭಾವನೆಯನ್ನು ವಿತರಿಸಲಾಗಿರುತ್ತದೆ.

2024-25ನೇ ಸಾಲಿನಲ್ಲಿ ಯೋಜನೆಯ ಅವಧಿ 31ನೇ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಯೋಜನೆಯಡಿ ತಾತ್ಕಾಲಿಕವಾಗಿ ಸೇವೆ ನಿರ್ವಹಿಸಿದ ಅಡುಗೆ ಸಿಬ್ಬಂದಿಯನ್ನು ದಿನಾಂಕ: 31.3.2025ರಂದು ಬಿಡುಗಡೆಗೊಳಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಲು ತಿಳಿಸಿದೆ. ಈ ರೀತಿ ಬಿಡುಗಡೆಗೊಳಿಸಿದ ಅಡುಗೆ ಸಿಬ್ಬಂದಿಯನ್ನು 2025-26 ನೇ ಶೈಕ್ಷಣಿಕ ಸಾಲಿಗೂ ಮುಂದುವರೆಸಲು ಅಗತ್ಯ ಕ್ರಮ ವಹಿಸುವುದು. ಈ ಸಂಬಂಧ ಶಾಲಾ ಪ್ರಾರಂಭದ ದಿನದಿಂದ ಇವರನ್ನು ತಾತ್ಕಾಲಿಕ ಸೇವೆಗೆ ಪಡೆಯುವುದು.

ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಯು 60 ವರ್ಷ ವಯೋಮಿತಿ ಮೀರಿದ ಪ್ರಕರಣಗಳಿದ್ದಲ್ಲಿ, ಅವರ ಬದಲಿಗೆ ಹೊಸ ಅಡುಗೆ ಸಿಬ್ಬಂದಿಯನ್ನು ಪಡೆಯಲು ಇಲಾಖೆಯಲ್ಲಿ ಜಾರಿಯಲ್ಲಿರುವ ಮಾರ್ಗಸೂಚಿಯಂತ ಅಗತ್ಯ ಕ್ರಮ ಕೈಗೊಳ್ಳುವುದು. ಶಾಲೆಯಲ್ಲಿ ಯೋಜನೆಯಡಿ ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ, ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಯಾವುದೇ ಅಡೆ-ತಡೆ ಇಲ್ಲದೇ ಸುಸೂತ್ರವಾಗಿ ನಡೆಸಲು ಪೂರಕ ಕ್ರಮಗಳನ್ನು ಕೈಗೊಂಡು ಯೋಜನೆಯ ಯಶಸ್ಸಿಗೆ ಶ್ರಮವಹಿಸಲು ಸೂಚಿಸಿದೆ.
ತತ್ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಕ್ಷಣಾಧಿಕಾರಿಗಳು (ಪಿಎಂಪೋಷಣ್) ಮತ್ತು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು (ಪಿಎಂಪೋಷಣ್) ರವರು ಸೂಕ್ತ ಮೇಲ್ವಿಚಾರಣೆಯನ್ನು ನಡೆಸುವುದು. ತತ್ಸಂಬಂಧಿತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ .

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು, ಪ್ರೇಯಸಿಯ ಪತಿಯನ್ನೆ ಕೊಂದ ಪ್ರಿಯಕರ!

07/04/2026 10:32 AM1 Min Read

ನಿಮ್ಮ `ಮೊಬೈಲ್’ ಪದೇ ಪದೇ ಹ್ಯಾಂಗ್ ಆಗುತ್ತಿದೆಯೇ? ಈ 5 ಕೆಲಸಗಳನ್ನು ಮಾಡಿದರೆ ಹೆಚ್ಚಲಿದೆ ವೇಗ.!

07/04/2026 10:30 AM2 Mins Read

ಶಾಸಕ ಭೈರತಿ ಬಸವರಾಜ್ ಗೆ ಮತ್ತೆ ಸಂಕಷ್ಟ : ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಜಾಮೀನು ರದ್ದು ಕೋರಿ ಮತ್ತೆ ಅರ್ಜಿ ಸಲ್ಲಿಸಿದ ಸರ್ಕಾರ!

07/04/2026 10:25 AM1 Min Read
Recent News

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು, ಪ್ರೇಯಸಿಯ ಪತಿಯನ್ನೆ ಕೊಂದ ಪ್ರಿಯಕರ!

07/04/2026 10:32 AM

ವಲಸೆ ಕಾರ್ಮಿಕರಿಗೆ ಬಿಗ್ ರಿಲೀಫ್ : ರಾಜ್ಯಗಳಿಗೆ 5 ಕೆಜಿ ಸಿಲಿಂಡರ್ ಹಂಚಿಕೆಯನ್ನು ದ್ವಿಗುಣಗೊಳಿಸಿದ ಕೇಂದ್ರ ಸರ್ಕಾರ

07/04/2026 10:30 AM

ನಿಮ್ಮ `ಮೊಬೈಲ್’ ಪದೇ ಪದೇ ಹ್ಯಾಂಗ್ ಆಗುತ್ತಿದೆಯೇ? ಈ 5 ಕೆಲಸಗಳನ್ನು ಮಾಡಿದರೆ ಹೆಚ್ಚಲಿದೆ ವೇಗ.!

07/04/2026 10:30 AM

SHOCKING : ಫೇಸ್‌ ಬುಕ್ ಲವರ್ ಜೊತೆಗೆ ಓಡಿ ಹೋದ ಪತ್ನಿ : ಪೋಲೀಸರ ಮುಂದೆಯೇ ಚಾಕುವಿನಿಂದ ಇರಿದು ಕೊಂದ ಪತಿ!

07/04/2026 10:25 AM
State News
KARNATAKA

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು, ಪ್ರೇಯಸಿಯ ಪತಿಯನ್ನೆ ಕೊಂದ ಪ್ರಿಯಕರ!

By kannadanewsnow0507/04/2026 10:32 AM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಅನೈತಿಕ ಸಂಬಂಧದಿಂದ ಕೊಲೆಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನಲ್ಲಿ ಇದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ,…

ನಿಮ್ಮ `ಮೊಬೈಲ್’ ಪದೇ ಪದೇ ಹ್ಯಾಂಗ್ ಆಗುತ್ತಿದೆಯೇ? ಈ 5 ಕೆಲಸಗಳನ್ನು ಮಾಡಿದರೆ ಹೆಚ್ಚಲಿದೆ ವೇಗ.!

07/04/2026 10:30 AM

ಶಾಸಕ ಭೈರತಿ ಬಸವರಾಜ್ ಗೆ ಮತ್ತೆ ಸಂಕಷ್ಟ : ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಜಾಮೀನು ರದ್ದು ಕೋರಿ ಮತ್ತೆ ಅರ್ಜಿ ಸಲ್ಲಿಸಿದ ಸರ್ಕಾರ!

07/04/2026 10:25 AM

BREAKING : ಬೆಂಗಳೂರು ಜನತೆ ಹುಷಾರ್ : ಗ್ಯಾಸ್ ಅಭಾವದ ಬೆನ್ನಲ್ಲೇ, ಮನೆಗೆ ನುಗ್ಗಿ ಸಿಲಿಂಡರ್ ಕದ್ದೋಯ್ದ ಕಳ್ಳ!

07/04/2026 10:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.