ಬೆಂಗಳೂರು : ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ. ಈ ಆರೂಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರ್ಯಕರ್ತ ಗಂಗರಾಜು ಅವರನ್ನು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದಾರೆ. ಹಾಗಾಗಿ ಇಂದು ಗಂಗರಾಜು ಅವರು ಬೆಂಗಳೂರಿನ ಇಡೀ ಕಚೇರಿಗೆ ಹಾಜರಾಗಲಿದ್ದಾರೆ.
ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜುಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮಾಹಿತಿ ನೀಡಲು ಬೆಂಗಳೂರಿನ ಕಚೇರಿಗೆ ಬರುವಂತೆ ಇಡಿ ಸೂಚನೆ ನೀಡಿದೆ. ದೂರವಾಣಿ ಕರೆ ಮಾಡಿ ಎಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಗಂಗರಾಜು ದಾಖಲೆಯನ್ನು ನೀಡಿ ಬಂದಿದ್ದರು.
ಅಕ್ಟೋಬರ್ 28ರಂದು ಗಂಗರಾಜು ಇಡಿ ಅಧಿಕಾರಿಗಳಿಗೆ ದಾಖಲೆ ನೀಡಿದ್ದರು. ಸರ್ಚ್ ವಾರೆಂಟ್ ಬಗ್ಗೆ ಆರ್‌ಟಿಐ ನಲ್ಲಿ ಗಂಗರಾಜು ಮಾಹಿತಿ ಕೇಳಿದ್ದಾರೆ. ಲೋಕಾಯುಕ್ತ ಡಿ ವೈ ಎಸ್ ಪಿ ಮಾಲ್ತೇಶ್ ವಿರುದ್ಧ ಗಂಗರಾಜು ಆರೋಪ ಮಾಡಿದ್ದರು. 8 ಕೋಟಿ ಲಂಚ ಸ್ವೀಕರಿಸಿ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗರಾಜು ರಾಜ್ಯಪಾಲರಿಗೂ ಕೂಡ ದೂರು ನೀಡಿದ್ದರು.