ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯ ಕಚೇರಿ ಮೇಲೆ ನಿನ್ನೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಚೀಫ್ ಕಮಿಷನರ್ ಕಚೇರಿ ಮೇಲೆ ಬೆಳಗ್ಗೆ 11 ಗಂಟೆ ವೇಳೆ ED ಅಧಿಕಾರಿಗಳು ದಾಳಿ ನಡೆಸಿ, ತಡರಾತ್ರಿ ವಾಪಾಸ್ ಆಗಿದ್ದು ಇಂದು ಬೆಳಿಗ್ಗೆ ಮತ್ತೆ ಕಚೇರಿಯಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೌದು ಬಿಬಿಎಂಪಿ ಕಚೇರಿಯಲ್ಲಿ ಪರಿಶೀಲನೆ ಮುಂದುವರೆಸಿದ ED ಅಧಿಕಾರಿಗಳು ತಡರಾತ್ರಿ ಬಿಬಿಎಂಪಿ ಕಚೇರಿಯಿಂದ ತೆರಳಿದ್ದರು. ಇದೀಗ ಇಂದು ಬೆಳಿಗ್ಗೆ ಮತ್ತೆ ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ.ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಕಚೇರಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ED ಅಧಿಕಾರಿಗಳು ಕಚೇರಿಯಿಂದ ಸಾಕಷ್ಟು ದಾಖಲೆ ಮತ್ತು ಕಡತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂರು ವರ್ಷಗಳ ಅವಧಿಯಲ್ಲಿ ಸುಮಾರು 960 ಕೋಟಿ ಪಡೆಯಲಾಗಿತ್ತು ಈ ಬಿಲ್ಗೆ ಕಾಮಗಾರಿಯ ಗುಣಮಟ್ಟ ಸುಳಿ ಲೆಕ್ಕದ ಆರೋಪ ಕೂಡ ಕೇಳಿ ಬಂದಿತ್ತು ಹೀಗಾಗಿ ಚೀಫ್ ಇಂಜಿನಿಯರ್ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದರು ಎಲ್ಲಾ ವಲಯದ ಇಂಜಿನಿಯರ್ಗಳನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ.ಬೆಂಗಳೂರು ವ್ಯಾಪ್ತಿಯಲ್ಲಿ 2016ರಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ ವೆಲ್ ನಲ್ಲಿ 9000 ಕೋಟಿ ಹಗರಣದ ಆರೋಪ ಕೇಳಿಬಂದಿದೆ. ಈ ಬೋರ್ ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ. ಹಗರಣಕ್ಕೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಏನಿದು ಬಿಬಿಎಂಪಿ ಬೋರ್ ವೆಲ್ ಹಗರಣ !?
2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ 9,558 ಕೊಳವೆ ಬಾವಿಗಳನ್ನ ಕೊರೆಯಲು ಶುರು ಮಾಡಿದ್ದ ಪಾಲಿಕೆ ಆ ಬಳಿಕ 976 ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಲೆಕ್ಕ ಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು ಆದ್ರೆ 9,588 ಕೊಳವೆಬಾವಿಗಳಲ್ಲಿ 10% ಕೊಳವೆಬಾವಿಗಳ ದಾಖಲೆ ಕೊಡಲು ಪಾಲಿಕೆ ಅಧಿಕಾರಿಗಳಿಗ ವಿಫಲರಾಗಿದ್ದರು.