Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ ಏಪ್ರೀಲ್ ನಿಂದ `SIR’ ಆರಂಭ : ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು !

20/02/2026 6:01 AM

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

20/02/2026 5:43 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಜಿಲ್ಲೆಗಳಲ್ಲಿ `ಸಿಟಿ- MRI ಸ್ಕ್ಯಾನ್’ ಸೇವೆ ಪುನರಾರಂಭ: `BPL’ ರೋಗಿಗಳಿಗೆ ಫ್ರೀ !

20/02/2026 5:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ `ಗಳಿಕೆ ರಜೆ’ : ಹಣ ಪಾವತಿಗೆ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ `ಗಳಿಕೆ ರಜೆ’ : ಹಣ ಪಾವತಿಗೆ ಸರ್ಕಾರ ಮಹತ್ವದ ಆದೇಶ

By kannadanewsnow5713/01/2026 6:52 AM

ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಆಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯಮಿತಗೊಳಿಸಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ದಿನಾಂಕ: 17.1.2025ರ ಸರ್ಕಾರಿ ಆದೇಶದಲ್ಲಿ 2025ನೇ ಸಾಲಿನ ಬ್ಲಾಕ್ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i)ರನ್ವಯ ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಸದರಿ ಬ್ಲಾಕ್ ಅವಧಿಯು ದಿನಾಂಕ:31.12.2025 ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವು 2026 ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮಾನವಾಗಿ ನಗದೀಕರಣ ಪಡೆಯುವ ಅವಕಾಶವನ್ನು ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿಸಿದ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಿದೆ. ಅದರಂತೆ ಈ ಆದೇಶಿಸಿದ್ದಾರೆ.

2026 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i)ರನ್ವಯ ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಸೌಲಭ್ಯವು ದಿನಾಂಕ:1.1.2026 ರಿಂದ 31.12.2026ರ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಈ ಸೌಲಭ್ಯವನ್ನು ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ನೀಡಿ ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ ಎಂದಿದ್ದಾರೆ.

ಗಳಿಕೆ ರಜೆ ನಗದೀಕರಣಕ್ಕೆ ಮಂಜೂರಾತಿ ನೀಡುವ ಆದೇಶವನ್ನು ಯಾವುದಾದರೂ ಕಾರಣದಿಂದ ನಿಗಧಿತ ಬ್ಲಾಕ್ ಅವಧಿಯಲ್ಲಿ ಹೊರಡಿಸಲು ಸಾಧ್ಯವಾಗದಿದ್ದರೆ ಸಂಬಂಧಿತ ಪ್ರಾಧಿಕಾರವು ಅಂತಹ ಆದೇಶವನ್ನು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಹೊರಡಿಸಬಹುದು. ಆದರೆ, ಗಳಿಕೆ ರಜೆ ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷವು ಅಂತ್ಯಗೊಳ್ಳುವ ಮುನ್ನ ಪಡೆಯತಕ್ಕದ್ದು ಎಂದು ಹೇಳಿದ್ದಾರೆ.

ಗೆಜೆಟೆಡ್ ಅಧಿಕಾರಿಗಳ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದಂತೆ, 2026 ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವಂತೆ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹವಾಗುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.

ಮುಂದುವರೆದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗುತ್ತವೆ ಎಂದು ಹೇಳಿದ್ದಾರೆ.

BIG NEWS: `Earned leave monetization' of state government employees: Important order from the government
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಏಪ್ರೀಲ್ ನಿಂದ `SIR’ ಆರಂಭ : ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು !

20/02/2026 6:01 AM1 Min Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಜಿಲ್ಲೆಗಳಲ್ಲಿ `ಸಿಟಿ- MRI ಸ್ಕ್ಯಾನ್’ ಸೇವೆ ಪುನರಾರಂಭ: `BPL’ ರೋಗಿಗಳಿಗೆ ಫ್ರೀ !

20/02/2026 5:25 AM2 Mins Read

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

20/02/2026 5:20 AM2 Mins Read
Recent News

BIG NEWS : ರಾಜ್ಯದಲ್ಲಿ ಏಪ್ರೀಲ್ ನಿಂದ `SIR’ ಆರಂಭ : ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು !

20/02/2026 6:01 AM

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

20/02/2026 5:43 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಜಿಲ್ಲೆಗಳಲ್ಲಿ `ಸಿಟಿ- MRI ಸ್ಕ್ಯಾನ್’ ಸೇವೆ ಪುನರಾರಂಭ: `BPL’ ರೋಗಿಗಳಿಗೆ ಫ್ರೀ !

20/02/2026 5:25 AM

ಸರ್ಕಾರದಿಂದ ‘ಭಾರತ್ ವಿಸ್ತಾರ್’ ಯೋಜನೆ ಪ್ರಾರಂಭ : ಒಂದೇ ಕ್ಲಿಕ್ ನಲ್ಲಿ ರೈತರಿಗೆ ಸಿಗಲಿದೆ ಈ ಎಲ್ಲಾ ಮಾಹಿತಿ !

20/02/2026 5:24 AM
State News
KARNATAKA

BIG NEWS : ರಾಜ್ಯದಲ್ಲಿ ಏಪ್ರೀಲ್ ನಿಂದ `SIR’ ಆರಂಭ : ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು !

By kannadanewsnow5720/02/2026 6:01 AM KARNATAKA 1 Min Read

ನವದೆಹಲಿ : ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಪೂರ್ವಸಿದ್ಧತಾ ಕಾರ್ಯಗಳನ್ನು “ಏಪ್ರಿಲ್‌ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು ಚುನಾವಣಾ…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಜಿಲ್ಲೆಗಳಲ್ಲಿ `ಸಿಟಿ- MRI ಸ್ಕ್ಯಾನ್’ ಸೇವೆ ಪುನರಾರಂಭ: `BPL’ ರೋಗಿಗಳಿಗೆ ಫ್ರೀ !

20/02/2026 5:25 AM

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

20/02/2026 5:20 AM

ಭಾರತದ ಟಾಪ್-10 ಶ್ರೀಮಂತ ರಾಜ್ಯಗಳ ಪಟ್ಟಿ ರಿಲೀಸ್ : ಕರ್ನಾಟಕವನ್ನು ಹಿಂದಿಕ್ಕಿ ಉತ್ತರ ಪ್ರದೇಶ 3ನೇ ಸ್ಥಾನ !

20/02/2026 5:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.