ಬೆಂಗಳೂರು : ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ಇದೀಗ ಸಂಚಾರ ದಟ್ಟಣೆ ಕೂಡ ಹೆಚ್ಚಾಗುತ್ತಿದೆ. ಕಂಪನಿಗಳಿಗೆ, ಸರ್ಕಾರಿ ಕಚೇರಿಗಳಿಗೆ ತೆರಳುವ ವೇಳೆ ಹಲವು ಬೈಕ್ ಸವಾರರು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಅದರಲ್ಲೂ ಇ ಕಾಮರ್ಸ್ ಬೈಕ್ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಇದೀಗ ಪ್ರಕರಣ ದಾಖಲಾಗಿವೆ.
ಹೌದು ಇ-ಕಾಮರ್ಸ್ ಬೈಕ್ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಫುಟ್ಪಾತ್ ನಲ್ಲಿ ಚಾಲನೆ 79 ಕೇಸ್, ನೋ ಎಂಟ್ರಿ 389 ಕೇಸ್, ಒನ್ ವೇ ಸಂಚಾರ 354 ಕೇಸ್, ನೋ ಪಾರ್ಕಿಂಗ್ 98 ಕೇಸ್, ಸಂಚಾರಕ್ಕೆ ಅಡಚಣೆ 148 ಕೇಸ್, ಹೆಲ್ಮೆಟ್ ರಹಿತ ಚಾಲನೆ ಮಾಡಿದ 582 ಜನರ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಎಲೆಕ್ಟ್ರಿಕ್ ಬೈಕ್ ಗಳಿಂದಲೇ ಸಂಚಾರ ನಿಯಮ ಉಲ್ಲಂಘನೆ ಆಗಿದೆ ಎಂದು ತಿಳಿದುಬಂದಿದೆ.